ನಕಲಿ ದಾಖಲೆ ಸೃಷ್ಟಿಸಿ ಕಟ್ಟಡಕ್ಕೆ ಕಂಪ್ಲೀಶನ್ ಸರ್ಟಿಫಿಕೇಟ್ ತಯಾರಿ ಯತ್ನ
ಕಾಸರಗೋಡು: ನಕಲಿ ದಾಖಲೆ ಸೃಷ್ಟಿಸಿ ಕಟ್ಟಡದ ಕಂಪ್ಲೀಶನ್ ಸರ್ಟಿಫಿಕೇಟ್ ತಯಾರಿಸಲು ಪ್ರಯತ್ನ ನಡೆದಿರುವುದು ಬೆಳಕಿಗೆ ಬಂದಿದೆ. ಕುತ್ತಿಕ್ಕೋಲ್ ಗ್ರಾಮ ಪಂಚಾಯತ್‌ನಲ್ಲಿ ಈ ವಂಚನೆ ನಡೆದಿದೆ. ಪಂಚಾಯತ್ ಕಾರ್ಯ ದರ್ಶಿ ಎನ್. ಅನಿಲ್ ಕುಮಾರ್‌ರ ದೂರಿನಂತೆ ಕುತ್ತಿಕ್ಕೋಲ್ ಚಿಟ್ಟ ಪ್ಪನ್ ಕುಂಡ್ ನಿವಾಸಿ ಸುಧೀಶ್ ಕುಮಾರ್ ವಿರುದ್ಧ ಬೇಡಗಂ ಪೊಲೀಸರು ಕೇಸು ದಾಖಲಿಸಿಕೊಂ ಡಿದ್ದಾರೆ. ಕೆ. ವಿಜಯಲಕ್ಷ್ಮಿ ಎಂಬವರಿಗೆ ಈ ಹಿಂದೆ ನೀಡಿದ ಕಟ್ಟಡ ನಿರ್ಮಾಣ ಸರ್ಟಿಫಿಕೇಟ್‌ನ ನಂಬ್ರ ಹಾಗೂ ಕ್ಯೂಆರ್ ಕೋಡ್ ಉಪಯೋಗಿಸಿ ನಕಲಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ಪತ್ರ ಸಲ್ಲಿಸಿರುವುದಾಗಿ ದೂರಲಾಗಿದೆ. ಓರ್ವ ಇಂಜಿನಿಯರ್ ಈ ವಂಚನೆಯ ಹಿಂದೆ ಕಾರ್ಯಾಚರಿಸಿ ದ್ದಾನೆಂಬ ಸೂಚನೆಯಿದೆ. ಪೊಲೀಸರ ತನಿಖೆ ಮುಂದುವರಿಯುತ್ತಿರುವುದ ರೊಂದಿಗೆ ಇನ್ನಷ್ಟು ಮಾಹಿತಿಗಳು ಬಹಿರಂಗಗೊಳ್ಳಲಿದೆಯೆಂದು ಪೊಲೀಸ್ ಹಾಗೂ ಪಂಚಾಯತ್ ಅಧಿಕೃತರು ನಿರೀಕ್ಷಿಸಿದ್ದಾರೆ.