ನಗರದ ವ್ಯಾಪಾರಿ ನಿಧನ
ಕಾಸರಗೋಡು: ನಗರದಲ್ಲಿ ವ್ಯಾಪಾರಿ ಹಾಗೂ ಎಂ.ಜಿ.ರೋಡ್ ನಲ್ಲಿರುವ ಫ್ಯಾಶನ್ ಸ್ಟೋರ್ ಮಾಲಕನಾದ ಫೋರ್ಟ್ ರೋಡ್‌ನ ಕರಿಪ್ಪೊಡಿ ಮುಹಮ್ಮದ್ (73) ನಿಧನಹೊಂದಿದರು. ಫೋರ್ಟ್ ರೋಡ್ ವಾರ್ಡ್ ಮುಸ್ಲಿಂ ಲೀಗ್ ಮಾಜಿ ಪ್ರಧಾನ ಕಾರ್ಯದರ್ಶಿ, ಶಿಹಾಬ್ ತಂಙಳ್ ಸಾಂಸ್ಕೃತಿಕ ಕೇಂದ್ರದ ಮುಖ್ಯ ರಕ್ಷಾಧಿಕಾರಿಯಾಗಿದ್ದರು.
ಮೃತರು ಪತ್ನಿ ಸಿ.ಎನ್. ಫಾತಿಮ, ಮಕ್ಕಳಾದ ನೌಶಾದ್, ಹಸೀನ, ಜಸೀಲ, ನಸೀಬ, ಶಂಸೀರ, ಅಳಿಯ-ಸೊಸೆಯಂದಿರಾದ ಕಾಸರಗೋಡು ನಗರಸಭಾ ಕೌನ್ಸಿಲರ್ ಹಸೀನ ನೌಶಾದ್, ಅಬೂಬಕರ್, ಎಂ.ಎ, ರಿಯಾಸ್ ಅಲಿ ತೆರುವತ್ತ್, ಶಬೀರ್ ಸಿ.ಎಲ್, ಶಾಕೀರ್ ಶಾಫಿ ಖತ್ತರ್, ಸಹೋದ ರರಾದ ಕರಿಪ್ಪೊಡಿ ಅಬ್ದುಲ್ಲ ಕುಂಞಿ, ರಶೀದ್ ಕರಿಪ್ಪೊಡಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.