ನವಜೀವನ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಕಲಿಕೋತ್ಸವ
ಬದಿಯಡ್ಕ: ನವಜೀವನ ಹೈಯರ್ ಸೆಕೆಂಡರಿ ಶಾಲೆಯ ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಕಲಿಕೋತ್ಸವ ನಡೆಯಿತು. ಪಿಟಿಎ ಅಧ್ಯಕ್ಷ ಶಾಫಿ ಚೂರಿಪಳ್ಳ ಅಧ್ಯಕ್ಷತೆ ವಹಿಸಿದರು. ವಾರ್ಡ್ ಪ್ರತಿನಿಧಿ ಶ್ಯಾಮ್ ಪ್ರಸಾದ್ ಮಾನ್ಯ ಉದ್ಘಾಟಿಸಿದರು. ಸಿಆರ್ಸಿ ಕೋ-ಆರ್ಡಿನೇಟರ್ ಭಾರತಿ ಟೀಚರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.
ಸ್ಟಾಫ್ ಕಾರ್ಯದರ್ಶಿ ಶಶಿಧರ ಮಾಸ್ಟರ್, ಹಿರಿಯ ಅಧ್ಯಾಪಕರಾದ ಕಾರ್ತಿಕ, ಸಿನಿ, ಪ್ರಭಾವತಿ ಶುಭ ಹಾರೈಸಿದರು. ವಿದ್ಯಾ ಟೀಚರ್, ತಂಗಮಣಿ, ಕೃಷ್ಣ ಕುಮಾರ್ ಉಪಸ್ಥಿತರಿದ್ದರು. ಸಂಚಾಲಕ ನಿರಂಜನ ರೈ ಪೆರಡಾಲ ಸ್ವಾಗತಿಸಿ, ಪ್ರಸ್ತಾಪಿಸಿದರು. ರಾಜೇಶ್ ಮಾಸ್ತರ್ ಅಗಲ್ಪಾಡಿ ವಂದಿಸಿದರು. ಜ್ಯೋತ್ಸ್ನಾ ಟೀಚರ್, ದಿವ್ಯ ನಿರ್ವಹಿಸಿದರು. ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿದರು.