ನಾಡಕೋವಿ ಸಹಿತ ಓರ್ವ ಸೆರೆ

ಕಾಸರಗೋಡು: ನಾಡಕೋವಿ ಕೈವಶವಿರಿಸಿಕೊಂಡಿದ್ದ ಓರ್ವನನ್ನು ಬೇಡಗಂ ಪೊಲೀಸರು ಬಂಧಿಸಿದ್ದಾರೆ.

ವಟ್ಟಪ್ಪಾರ ನಿವಾಸಿ ಸಿ. ಅಶೋಕನ್ ಎಂಬಾತ ಬಂಧಿತ ವ್ಯಕ್ತಿಯಾಗಿದ್ದಾನೆ. ಮುನ್ನಾಡ್ ಸಹಕಾರಿ ಆಸ್ಪತ್ರೆ ಬಳಿಯ ಗೂಡಂಗಡಿ ಬಳಿ ಈತ ಕೋವಿ ಸಹಿತ ತಲುಪಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು.  ಕೂಡಲೇ ಅಲ್ಲಿಗೆ ತಲುಪಿದ ಪೊಲೀಸರು ಅಶೋಕನ್‌ನನ್ನು ಕಸ್ಟಡಿಗೆ  ತೆಗೆದು ತಪಾಸಣೆ ನಡೆಸಿದಾಗ ಆತನ ಕೈವಶ ಕೋವಿ ಇರುವುದಾಗಿ ತಿಳಿದು ಬಂದಿದೆ. ಅದನ್ನು ವಶಪಡಿಸಿ ತಪಾ ಸಣೆಗೊಳಪಡಿಸಿದಾಗ ಕೋವಿಯಲ್ಲಿ ಮದ್ದುಗುಂಡು ತುಂಬಿಸಿಟ್ಟಿರುವುದು ಕಂಡುಬಂದಿದೆ. ಯಾವ ಉದ್ದೇಶ ದಿಂದ ಈತ ಕೋವಿ ಸಹಿತ ತಲುಪಿದ್ದಾನೆಂದು ತಿಳಿದುಬಂದಿಲ್ಲ. ಆ ಬಗ್ಗೆ ತನಿಖೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ.

You cannot copy contents of this page