ನಾಪತ್ತೆಯಾದ ಯುವಕ ಮುಂಬೈಯಲ್ಲಿ ಪತ್ತೆ 

ಮಂಜೇಶ್ವರ: ನಾಪತ್ತೆಯಾಗಿದ್ದ ಯುವಕ ಮುಂಬೈಯಲ್ಲಿ ಪತ್ತೆಯಾಗಿ ದ್ದಾರೆ. ಕುಂಜತ್ತೂರು ನಿವಾಸಿ ಮೂಸರ ಪುತ್ರ ನೌಶಾದ್ (31) ಮುಂಬೈ ಯಲ್ಲಿರುವುದಾಗಿ ತಿಳಿದುಬಂದಿದೆ. ಈ ತಿಂಗಳ  16ರಂದು ಇವರು ನಾಪತ್ತೆ ಯಾದ ಬಗ್ಗೆ ಸಹೋದರ ಹನೀಫ್ ನೀಡಿದ ದೂರಿನಂತೆ  ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿ ದ್ದರು. ಅವರಿಗಾಗಿ ಶೋಧ ನಡೆಸುತ್ತಿ ದ್ದಂತೆ ನೌಶಾದ್ ಮುಂಬೈಯಲ್ಲಿರುವು ದಾಗಿ ಅಲ್ಲಿರುವ  ಸ್ನೇಹಿತರು ಮನೆಯವ ರಿಗೆ ಮಾಹಿತಿ ನೀಡಿದ್ದಾರೆ.

You cannot copy contents of this page