ನಾಯಮ್ಮಾರ್ಮೂಲೆ ಬಳಿ 2 ಗುಂಪುಗಳ ಮಧ್ಯೆ ಘರ್ಷಣೆ
ಕಾಸರಗೋಡು: ನಾಯಮ್ಮಾರ್ಮೂಲೆ ನಾಲ್ಕನೇಮೈಲು ಬಳಿಯ ನಾಯನಾರ್ ಆಸ್ಪತ್ರೆ ಎದುರು ನಿನ್ನೆ ರಾತ್ರಿ ಪರಸ್ಪರ ಘರ್ಷಣೆಯಲ್ಲಿ ತೊಡಗಿದ್ದು, ಅದರಲ್ಲಿ ಹಲವರು ಗಾಯಗೊಂಡಿರುವುದಾಗಿ ಹೇಳಲಾಗಿದೆ. ವಿಷಯ ತಿಳಿದ ವಿದ್ಯಾನಗರ ಪೊಲೀಸರು ಸ್ಥಳಕ್ಕೆ ಆಗಮಿಸಿ ಘರ್ಷಣೆಯಲ್ಲಿ ತೊಡಗಿದವರನ್ನು ಅಲ್ಲಿಂದ ಹೊಡೆದೋಡಿಸಿದ್ದಾರೆ. ಇದಕ್ಕೆ ಸಂಬಂಧಿಸಿ ಮುಂಜಾಗ್ರತಾ ಕ್ರಮವೆಂಬಂತೆ 15 ಮಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.