ನಾರಂಪಾಡಿ ಶ್ರೀ ಉಮಾಮಹೇಶ್ವರ ಕ್ಷೇತ್ರ ಧ್ವಜಸ್ತಂಭ ಮೆರವಣಿಗೆ: ವಿವಿಧೆಡೆ ಸ್ವಾಗತ
ನಾರಂಪಾಡಿ: ಇಲ್ಲಿನ ಶ್ರೀ ಉಮಾ ಮಹೇಶ್ವರ ದೇವಸ್ಥಾನದಲ್ಲಿ ಸ್ಥಾಪಿಸಲಿರುವ ಧ್ವಜಸ್ತಂಭದ ಮೆರವಣಿಗೆ ನಿನ್ನೆ ಮೂಲಕ ಭಕ್ತಿ ಸಂಭ್ರಮದಿಂದ ನಡೆಯಿತು. ಈಶ್ವರಮಂಗಲ ಪುಂಡಿಕಾಯಿ ಚರವು ಎಂಬಲ್ಲಿನ ಪ್ರಶಾಂತ್ ಕೃಷ್ಣ ಭಟ್ರ ಸ್ಥಳದಿಂದ ಮರವನ್ನು ಮೆರವಣಿಗೆ ಮೂಲಕ ನಾರಂಪಾಡಿ ಕ್ಷೇತ್ರಕ್ಕೆ ತರಲಾಗಿದೆ. ಬ್ರಹ್ಮಶ್ರೀ ಗಣೇಶ ತಂತ್ರಿ ದೇಲಂಪಾಡಿ ಇವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆದಿದ್ದು, ವೈದಿಕ ಕಾರ್ಯಗಳಿಗೆ ಅರ್ಚಕ ಶಂಕರ ನಾರಾಯಣ ಕೆದಿಲ್ಲಾಯರು ಭಾಗವ ಹಿಸಿದರು. ಅಂಕುರ ಎಂಟರ್ಪ್ರೈಸಸ್ ನವರು ವಾಹನದ ವ್ಯವಸ್ಥೆ ಮಾಡಿದ್ದರು.
ಮೆರವಣಿಗೆ ಸಾಗಿದ ಸ್ಥಳದಲ್ಲಿ ವಿವಿಧ ಸಂಘ-ಸಂಸ್ಥೆಗಳು, ವ್ಯಕ್ತಿಗಳಿಂದ ಸ್ವಾಗತ ನೀಡಲಾಯಿತು. ಸುಳ್ಯಪದವು ಕೊರಗತನಿಯ ಶಬರಿನಗರ, ಸಬ್ರಕಜೆ ಹಲೋ ಫ್ರೆಂಡ್ಸ್, ಓಂ ಶಿವ ನೆಟ್ಟಣಿಗೆ, ಕುಂಞಿರಾಮ ಮಣಿಯಾಣಿ ಕಿನ್ನಿಂಗಾರು, ನವನೀತಪ್ರಿಯ ಕೇಶವಭಟ್, ವಿಷ್ಣುಮೂರ್ತಿ, ಧೂಮಾವತಿ ಭಜನಾ ಸಂಘ ಕಿನ್ನಿಂಗಾರು, ಶಾಸ್ತಾರ ಭಜನಾ ಮಂದಿರ ಗಿರಿಪುರ ಬೀಜದಕಟ್ಟೆ, ದುರ್ಗಾಪರ ಮೇಶ್ವರಿ ಭಜನಾ ಸಂಘ ಏತಡ್ಕ, ತಂಬಾ ಐದುಮನೆಯವರು, ಪಾಲೆಕ್ಕಾರು ಭಕ್ತವೃಂದ, ಪೊಡಿಪ್ಪಳ್ಳ ಚೀರುಂಭಾ ಭಗವತೀ ಕ್ಷೇತ್ರ, ಅಗಲ್ಪಾಡಿ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರ, ಅಮ್ಮ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್, ಶ್ರೀ ಧರ್ಮಶಾಸ್ತಾ ಭಜನಾ ಮಂದಿರ ಕುರುಮುಜ್ಜಿಕಟ್ಟೆ, ಮಹಿಷಮರ್ದಿನಿ ಇಂಜಿನಿಯರ್ ವರ್ಕ್ಸ್, ನಾರಂಪಾಡಿ ಗುತ್ತು ಸಮಿತಿ, ಶಿವಗಿರಿ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್, ಪಾಂಚಜನ್ಯ ಭಜನಾ ಸಂಘ, ಶ್ರೀಮಾತಾ ನೃತ್ಯ ಭಜನಾ ಸಂಘ, ನಾಸಿಕ್ ಬ್ಯಾಂಡ್ ಮೇಳ, ತತ್ವಮಸಿ ಸಿಂಗಾರಿಮೇಳ, ಆರ್ಯಾಂಭಾ ಮಾತೃ ಮಂಡಳಿ ಸಹಿತ ವಿವಿಧ ಸಂಘ-ಸಂಸ್ಥೆಗಳು ಧ್ವಜಸ್ತಂಭಕ್ಕೆ ಹೂವು ಅರ್ಪಿಸಿ ಸ್ವಾಗತ ಕೋರಿವೆ. ಮೆರವಣಿಗೆಯಲ್ಲಿ ನೂರಾರು ಭಕ್ತರು ಭಗವಹಿಸಿದ್ದು, ಪಂಚವಾದ್ಯ, ಚೆಂಡೆಮೇಳವೂ ಇತ್ತು.