ನಿವೃತ್ತ ಗ್ರಾಮಾಧಿಕಾರಿ ನಿಧನ
ಮೀಂಜ: ಕೋಳ್ಯೂರು ಸಿಂತಾಜೆ ನಿವಾಸಿ, ನಿವೃತ್ತ ಗ್ರಾಮಾಧಿಕಾರಿ ಸಿ. ನಾರಾಯಣ (82) ನಿಧನಹೊಂದಿ ದರು. ಅಸೌಖ್ಯ ನಿಮಿತ್ತ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು. ಪೈವಳಿಕೆ, ಕೊಡ್ಲಮೊಗರು, ಮೀಂಜ, ವರ್ಕಾಡಿ, ಕಡಂಬಾರು ಗ್ರಾಮ ಕಚೇರಿಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು.
ಮೃತರು ಪತ್ನಿ ಗುಲಾಬಿ, ಮಕ್ಕ ಳಾದ ಪ್ರೇಮ, ರವೀಂದ್ರ, ಶಾಂತಾ ರಾಮ್ (ಶಿಕ್ಷಕ), ಜಯಭಾರತಿ, ಅಳಿಯಂದಿರಾದ ನಾರಾಯಣ, ಸುರೇಶ ಎಡನಾಡ (ಉಪನ್ಯಾಸಕ), ಸೊಸೆಯಂದಿರಾದ ರಚನಾ, ಚೈತ್ರಾ, ಸಹೋದರಿ ಲಕ್ಷ್ಮಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.