ನೀರ್ಚಾಲಿನಲ್ಲಿ ವಿಶ್ವ ಯೋಗಾನುಷ್ಠಾನ 21ರಂದು
ಬದಿಯಡ್ಕ: ಸಾಂದೀಪಿನಿ ಯೋಗಕೇಂದ್ರ ಬದಿಯಡ್ಕ ಇವರ ನೇತೃತ್ವದಲ್ಲಿ ಜೂನ್.21ರಂದು ವಿಶ್ವಯೋಗದಿನದ ಪ್ರಯುಕ್ತ ಕಾಸರಗೋಡು ತಾಲೂಕಿನಲ್ಲಿರುವ ಶಾಲೆಗಳನ್ನು ಕೇಂದ್ರೀಕರಿಸಿ ನೀರ್ಚಾಲು ಮಹಾಜನ ವಿದ್ಯಾಲಯದಲ್ಲಿ ವಿಶ್ವಯೋಗಾನುಷ್ಠಾನ ನಡೆಯಲಿದೆ. ಎಡನೀರು ಮಠಾದಿsÃಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಯವರ ಉಪಸ್ಥಿತಿಯಲ್ಲಿ ಯೋಗ ಪಟುಗಳ ಯೋಗಪ್ರಾತ್ಯಕ್ಷಿಕೆ, ಸಾಮೂ ಹಿಕ ಸೂರ್ಯನಮಸ್ಕಾರ, ಪ್ರಾಣಾ ಯಾಮ ನಡೆಯಲಿದೆ. ಸರಕಾರಿ ಅದಿs ಕಾರಿಗಳು ರಾಜಕೀಯ ಮುಖಂಡರು, ವಿವಿಧ ಸಂಘಸAಸ್ಥೆಗಳು, ಶಾಲೆಯ ಮಕ್ಕಳು, ಹೆತ್ತವರು ಭಾಗವಹಿಸಲಿ ದ್ದಾರೆ ಎಂದು ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು ತಿಳಿಸಿದ್ದಾರೆ.