ನುಳ್ಳಿಪ್ಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ಕ್ಷೇತ್ರ ವತಿಯಿಂದ ಲೆಫ್ಟಿನೆಂಟ್ ಸಾತ್ವಿಕ್ ರೈಯವರಿಗೆ ಅಭಿನಂದನೆ

ಕಾಸರಗೋಡು: ಭಾರತೀಯ ಭೂಸೇನೆಗೆ ಲೆಫ್ಟಿನೆಂಟ್ ಆಗಿ ನೇರ ನೇಮಕಾತಿಗೊಂಡ ನುಳ್ಳಿಪ್ಪಾಡಿಯ ಸಾತ್ವಿಕ್ ಎಸ್. ರೈಯವರನ್ನು ನುಳ್ಳಿಪ್ಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ಕ್ಷೇತ್ರ ಆಡಳಿತ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಕ್ಷೇತ್ರ ಪರಿಸರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಿತಿಯ ಹಿರಿಯ ಸದಸ್ಯ ಸುಂದರ ಕೋಹಿ ನೂರು ರಾಮನ್ ಚೆನ್ನಿಕರೆ, ಎ. ನಾರಾ ಯಣ, ಸಮಿತಿ ಅಧ್ಯಕ್ಷ ರವೀಂದ್ರ ಕೋಟೆಕಣಿ, ಕಾರ್ಯ ದರ್ಶಿ ಕಿಶೋರ್ ಕುಮಾರ್, ಕೋಶಾಧಿ ಕಾರಿ ಹರೀಶ್ ಕುಮಾರ್ ಕೋಟೆ ಕಣಿ, ಮಹಾಲಿಂಗ ಕೋಟೆಕಣಿ, ಗಣೇಶ್ ಅಮೈ, ಸಂತೋಷ್ ಕುಮಾರ್ ನೆಲ್ಲಿಕುಂಜೆ ಭಾಗವ ಹಿಸಿದರು. ಕಾಸರಗೋಡಿನ ಹಿರಿಯ  ನ್ಯಾಯವಾದಿ ಸದಾನಂದ ರೈ- ಪ್ರಾಧ್ಯಾಪಕಿ ಶರಣ್ಯಾ ಎಸ್. ರೈಯವರ ಪುತ್ರನಾಗಿದ್ದಾರೆ.

You cannot copy contents of this page