ಪಂಚಾಯತ್ಗೆ ನಿರ್ಲಕ್ಷ್ಯ: ಕುಂಬಳೆಯಲ್ಲಿ ಸೇವಾ ಭಾರತಿಯಿಂದ ಶೌಚಾಲಯ ಸೌಕರ್ಯ
ಕುಂಬಳೆ: ಕುಂಬಳೆ ಪೇಟೆಯಲ್ಲಿ ಪ್ರಾಥಮಿಕ ಅಗತ್ಯಗಳನ್ನು ಪೂರೈಸಲು ಶೌಚಾಲಯವನ್ನು ಕೂಡಾ ಸ್ಥಾಪಿಸದ ಪಂಚಾಯತ್ ಅಧಿಕಾರಿಗಳ ನಿರ್ಲಕ್ಷ್ಯ ನಿಲುವನ್ನು ಕಂಡು ಸಹನೆಗೆಟ್ಟ ಸೇವಾ ಭಾರತಿ ವಿದ್ಯಾರ್ಥಿಗಳು, ವ್ಯಾಪಾರಿಗಳು, ಸಾರ್ವಜನಿಕರಿಗಾಗಿ ಪೇಟೆಯಲ್ಲಿ ಶೌಚಾಲಯ ನಿರ್ಮಿಸಿ ಅದರ ಉದ್ಘಾಟನೆ ನಡೆಸಲಾಯಿತು. ಪೂರ್ಣ ಸಜ್ಜೀಕರಣಗಳೊಂದಿಗೆ ಸ್ಥಾಪಿಸಿದ ಶೌಚಾಲಯ ಪೂರ್ಣ ಉಚಿತವಾಗಿ ಕಾರ್ಯಾಚರಿಸು ವುದು. ಶೌಚಾಲಯ ಉಪ ಯೋಗಿಸಿದ ಬಳಿಕ ಸಹಾಯ ನೀಡುವುದಾದಲ್ಲಿ ಅದಕ್ಕೆ ಶೌಚಾಲಯ ಸಮೀಪ ಸಹಾಯ ಪೆಟ್ಟಿಗೆ ಸ್ಥಾಪಿಸಲಾಗಿದೆ. ಶೌಚಾಲಯ ನಿರ್ವಹಣೆಯ ಪೂರ್ಣ ಖರ್ಚು ಸೇವಾ ಭಾರತಿ ವಹಿಸುತ್ತಿದೆ. ಶೌಚಾಲಯದ ಅಭಾವದಿಂದ ಪೇಟೆಗೆ ತಲುಪುವ ಮಕ್ಕಳು, ಮಹಿಳೆಯರು, ಸಹಿತ ಸಾರ್ವ ಜನಿಕರು ತೀವ್ರ ಸಮಸ್ಯೆಗೊಳ ಗಾಗಿದ್ದರು. ಆದರೆ ಪಂಚಾಯತ್ ಅಧಿಕಾರಿಗಳು ಕಣ್ಣು ಮುಚ್ಚಿ ಮೌನ ಪಾಲಿಸುತ್ತಿದ್ದಾರೆ. ಎಲ್ಲಾ ಸೌಕರ್ಯಗಳುಳ್ಳ ಶೌಚಾಲಯದಲ್ಲಿ ಮಹಿಳೆಯರು ಹಾಗೂ ಪುರುಷರಿ ಗಾಗಿ ಹತ್ತರಷ್ಟು ಕೊಠಡಿಗಳಿವೆ.
ಶೌಚಾಲಯದ ಉದ್ಘಾ ಟನೆಯನ್ನು ಡಾ. ಸರ್ವೇಶ್ವರ ಭಟ್ ನಿರ್ವಹಿಸಿದರು. ಆರ್.ಎಸ್.ಎಸ್, ಸೇವಾ ಭಾರತಿ ಕಾರ್ಯಕರ್ತರು ಕಾರ್ಯ ಕ್ರಮದಲ್ಲಿ ಭಾಗವಹಿಸಿದರು.