ಪಟಾಕಿ ದುರಂತ: ಎಸ್‌ಎನ್‌ಡಿಪಿ ಯೋಗಂನಿಂದ ಆರ್ಥಿಕ ಸಹಾಯ

ಹೊಸದುರ್ಗ:  ತೆರು ಅಂಞೂ ಟಂಬಲಂ ವೀರರ್ ಕಾವು ದೇವಸ್ಥಾ ನದಲ್ಲಿ ಕಳಿಯಾಟ ಮಹೋತ್ಸವದ ವೇಳೆ ಸಂಭವಿಸಿದ ಪಟಾಕಿ ದುರಂತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾಗ  ಮೃತಪಟ್ಟವರ ಮನೆಗಳಿಗೆ ಎಸ್‌ಎನ್‌ಡಿಪಿ ಯೋಗದ ಪದಾಧಿ ಕಾರಿಗಳು ಭೇಟಿ ನೀಡಿದರು. ಇದೇ ವೇಳೆ ಆರ್ಥಿಕವಾಗಿ ಹಿಂದುಳಿದ ೫  ಕುಟುಂಬಗಳಿಗೆ ಎಸ್‌ಎನ್ ಡಿಪಿ ಯೋಗಂ ಪ್ರಧಾನ ಕಾರ್ಯದರ್ಶಿ ವೆಳ್ಳಾಪಳ್ಳಿ ನಟೇಶನ್ ಹಾಗೂ ಉಪಾಧ್ಯಕ್ಷ ತುಷಾರ್ ವೆಳ್ಳಾಪಳ್ಳಿ  ನೀಡಿದ ತುರ್ತು ಸಹಾಯವನ್ನು ಎಸ್‌ಎನ್‌ಡಿಪಿ ಯೋಗ ದೇವಸ್ವಂ ಕಾರ್ಯದರ್ಶಿ ಅರಾಯಕಂಡಿ ಸಂತೋಷ್ ಕುಟುಂಬಗಳಿಗೆ ಹಸ್ತಾಂತರಿಸಿದರು.

ಮೃತಪಟ್ಟ ಓರ್ಕುಳದ ಶಿಬಿಲ್ ರಾಜ್‌ರ ಕುಟುಂಬಕ್ಕೆ  ಕಿನಾವೂರು ರಸ್ತೆಯ ಸಂದೀಪ್, ಮಂಞಳಂ ಕಾಡಿನ  ಬಿಜು, ಕಿನಾವೂರಿನ ರಜಿತ್, ರತೀಶ್ ಮುಂತಾದವರ ಕುಟುಂಬಕ್ಕೆ ೧ ಲಕ್ಷ ರೂಪಾಯಿಯಂತೆ ಹಸ್ತಾಂತರಿಸಲಾಯಿತು. ಜಿಲ್ಲೆಯ ವಿವಿಧ ಎಸ್‌ಎನ್‌ಡಿಪಿ ಯೋಗದ ಯೂನಿಯನ್ ಪದಾಧಿಕಾ ರಿಗಳು ಜೊತೆಗಿದ್ದರು. ಮರಣಹೊಂದಿದ ಕುಟುಂಬಗಳಿಗೆ ಸಾಂತ್ವನ ವ್ಯಕ್ತಪಡಿ ಸಿದರು.  ಅಗಲಿಕೆಗೆ ಎಸ್‌ಎನ್‌ಡಿಪಿ ಯೋಗಂ ಕಾಸರಗೋಡು, ಉದುಮ, ಹೊಸದುರ್ಗ, ವೆಳ್ಳರಿಕುಂಡ್, ತೃಕ್ಕರಿಪುರ ಯೂನಿಯನ್‌ಗಳ ಸಂಯುಕ್ತ ಸಭೆಯಲ್ಲಿ ಸಂತಾಪ ಸೂಚಿಸಲಾಯಿತು.

ಹೊಸದುರ್ಗ ಎಸ್‌ಎನ್‌ಡಿಪಿ ಯೋಗಂ ಯೂನಿಯನ್ ಅಧ್ಯಕ್ಷ ಎಂ.ವಿ. ಭರತನ್ ಅಧ್ಯಕ್ಷತೆ ವಹಿಸಿದರು. ಎಸ್‌ಎನ್‌ಡಿಪಿ ಯೋಗಂ ಇನ್‌ಸ್ಪೆಕ್ಟಿಂಗ್ ಆಫೀಸರ್ ಪಿ.ಟಿ. ಲಾಲು, ಯೋಗ ಡೈರೆಕ್ಟರ್ ಬೋರ್ಡ್ ಸದಸ್ಯ ಪಿ. ದಾಮೋದರ ಪಣಿಕ್ಕರ್, ಕಾಸರಗೋಡು ಯೂನಿಯನ್  ಕಾರ್ಯದರ್ಶಿ ಗಣೇಶ್ ಪಾರೆಕಟ್ಟೆ, ಉಪಾಧ್ಯಕ್ಷರಾದ ಕೆ.ಟಿ. ವಿಜಯನ್, ಉದುಮ ಯೂನಿಯನ್ ಅಧ್ಯಕ್ಷ ಕೇವೀಸ್ ಬಾಲಕೃಷ್ಣನ್ ಮಾಸ್ತರ್, ಕಾರ್ಯದರ್ಶಿ ಜಯಾನಂದನ್ ಪಾಲಕುನ್ನು, ತೃಕರಿಪುರ ಯೂನಿಯನ್ ಕನ್ವೀನರ್ ಕೆ. ಕುಂಞಿಕೃಷ್ಣನ್, ತಲಶ್ಶೇರಿ ಯೂನಿಯನ್ ಅಧ್ಯಕ್ಷ ಜಿತೇಶ್ ವಿಜಯನ್, ಯೂತ್ ಮೂವ್‌ಮೆಂಟ್ ಕೇಂದ್ರ ಸಮಿತಿ ಜತೆ ಕಾರ್ಯದರ್ಶಿ ಪಿ. ಜೋಷಿ, ಮಲಬಾರ್ ಸೈಬರ್ ಸೇನ ಕೋ-ಓರ್ಡಿನೇಟರ್ ಅರ್ಜುನ್ ಅರಯಾ ಕಂಡಿ, ಕಾಲಿಚಾನಡ್ಕಂ ಎಸ್‌ಎನ್‌ಡಿಪಿ ಯೋಗ ಆರ್ಟ್ಸ್ ಆಂಡ್ ಸಯನ್ಸ್ ಕಾಲೇಜು ಪ್ರಾಂಶುಪಾಲೆ ಡಾ. ಶ್ರೀಜಾ, ಯೂನಿಯನ್ ವನಿತ ಸಂಘ ಅಧ್ಯಕ್ಷ ಪಿ. ವತ್ಸಲ, ಕಾರ್ಯದರ್ಶಿ ಪ್ರಮೀಳ ದಿಲೀಪ್, ಶಾಖಾ ಸದಸ್ಯ ಪಿ. ಕರುಣಾಕರನ್, ತುರುತ್ತಿ ಶಾಖಾ ಕಾರ್ಯದರ್ಶಿ ಸುಗುಣನ್ ಮಾತನಾಡಿದರು. ಹೊಸದುರ್ಗ ಯೂನಿಯನ್ ಕಾರ್ಯದರ್ಶಿ ಪಿ.ವಿ. ವೇಣುಗೋಪಾಲನ್ ಸ್ವಾಗತಿಸಿ,  ಯೋಗ ಡೈರೆಕ್ಟರ್ ಬೋರ್ಡ್ ಸದಸ್ಯ ಸಿ. ನಾರಾಯಣನ್ ವಂದಿಸಿದರು.

Leave a Reply

Your email address will not be published. Required fields are marked *

You cannot copy content of this page