ಪಾರೆಕಟ್ಟೆ ಘರ್ಷಣೆ : ಎರಡು ಪ್ರಕರಣ ದಾಖಲು
ಕಾಸರಗೋಡು: ಕೂಡ್ಲು ಪಾರೆಕಟ್ಟೆಯಲ್ಲಿ ಮೊನ್ನೆ ರಾತ್ರಿ ಬಿಜೆಪಿ ಮತ್ತು ಡಿವೈಎಫ್ಐ ಕಾರ್ಯಕರ್ತರ ಮಧ್ಯೆ ಉಂಟಾದ ಘರ್ಷಣೆಗೆ ಸಂಬಂಧಿಸಿ ವಿದ್ಯಾನಗರ ಪೊಲೀಸರು ಎರಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಘರ್ಷಣೆಯಲ್ಲಿ ಗಾಯಗೊಂಡ ಡಿವೈಎಫ್ಐ ಕಾರ್ಯಕರ್ತರಾದ ಮಧೂರಿನ ಶೈಲೇಶ್ (೨೦) ಮತ್ತು ಕೂಡ್ಲಿನ ಶರತ್ (೨೦), ಪಾರೆಕಟ್ಟೆಯ ಕಿಶೋರ್ ಎಂಬವರು ನೀಡಿದ ದೂರಿನ ಪ್ರಕಾರ ಬಿಜೆಪಿ ಕಾರ್ಯಕರ್ತರಾದ ಅಖಿಲ್, ಶಿವರಾಜ್, ಪವನ್ ರಾಖೇಶ್ ಮತ್ತು ಧನುಷ್ ಎಂಬವರ ವಿರುದ್ಧ ಪೊಲೀಸರು ನರಹತ್ಯಾ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದೇ ಘರ್ಷಣೆಯಲ್ಲಿ ಗಾಯಗೊಂಡ ಉದಯಗಿರಿಯ ಬಿಜೆಪಿ ಕಾರ್ಯಕರ್ತ ಅಖಿಲ್ (೨೪) ನೀಡಿದ ದೂರಿನ ಪ್ರಕಾರ ಡಿವೈಎಫ್ ಕಾರ್ಯಕರ್ತರಾದ ಶೈಲೇಶ್ ಮತ್ತು ಅಜಿತ್ ಎಂಬವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪಾರೆಕಟ್ಟೆಯಲ್ಲಿ ಡಿವೈಎಫ್ಐಯ ಮಾನವ ಸರಣಿ ಫ್ಲೆಕ್ಸ್ ಬೋರ್ಡ್ ಸ್ಥಾಪಿಸುವ ವಿಷಯದಲ್ಲಿ ಮೊನ್ನೆ ರಾತ್ರಿ ಈ ಘರ್ಷಣೆ ಉಂಟಾಗಿತ್ತು.