ಪಿಕ್‌ಅಪ್ ವ್ಯಾನ್- ಬೈಕ್ ಢಿಕ್ಕಿ: ಕಾಲೇಜು ವಿದ್ಯಾರ್ಥಿ ಮೃತ್ಯು
ಕಣ್ಣೂರು: ತಳಿಪರಂಬ ಸಮೀಪ ಪಿಲಾತ್ತರದಲ್ಲಿ ಪಿಕ್‌ಅಪ್ ವ್ಯಾನ್ ಹಾಗೂ ಬುಲ್ಲೆಟ್ ಬೈಕ್ ಢಿಕ್ಕಿ ಹೊಡೆದು ಕಾಲೇಜು ವಿದ್ಯಾರ್ಥಿ ಮೃತಪಟ್ಟ ಘಟನೆ ಸಂಭವಿಸಿದೆ. ತೃಕ್ಕರಿಪುರ ಕೊಯೋಂಕರ ನಿವಾಸಿಯೂ, ಪಿಲಾತ್ತರ ಸೆಂಟ್ ಜೋಸೆಫ್ ಕಾಲೇಜು ವಿದ್ಯಾರ್ಥಿಯಾದ ಅಪ್ಪು ಯಾನೆ ಆದಿತ್ಯನ್ (20) ಮೃತಪಟ್ಟ ದುರ್ದೈವಿ. ಇಂದು ಮುಂಜಾನೆ 4.50ರ ವೇಳೆ ಅಪಘಾತ ವುಂಟಾಗಿದೆ. ಕಣ್ಣೂರು ಭಾಗದಲ್ಲಿ ತರಕಾರಿ ಇಳಿಸಿ ಮರಳುತ್ತಿದ್ದ ಪಿಕ್‌ಅಪ್ ವ್ಯಾನ್ ಆದಿತ್ಯನ್ ಸಂಚರಿಸುತ್ತಿದ್ದ ಬೈಕ್‌ಗೆ ಢಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡ ಆದಿತ್ಯನ್ ಘಟನೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.