ಪುತ್ತಿಗೆ ಕ್ಷೇತ್ರದಲ್ಲಿ ಮಕರಸಂಕ್ರಮಣ ಮಹೋತ್ಸವ
ಪುತ್ತಿಗೆ: ಪುತ್ತಿಗೆ ಶ್ರೀ ಕಿನ್ನಿಮಾಣಿ ದೈವ ಹಾಗೂ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ಮಕರಸಂಕ್ರಮಣ ಮಹೋತ್ಸವ ಇಂದಿನಿಂದ ೧೫ರ ವರೆಗೆ ಜರಗಲಿದೆ. ಇಂದು ಮಧ್ಯಾಹ್ನ ೧೨ಕ್ಕೆ ಮಹಾಪೂಜೆ, ಗಣಪತಿ ಪೂಜೆ,ರಾತ್ರಿ ೭.೩೦ಕ್ಕೆ ಅತ್ತಾಳಪೂಜೆ ನಡೆಯಲಿದೆ. ನಾಳೆ ಬೆಳಿಗ್ಗೆ ೬.೩೦ಕ್ಕೆ ಉಷಃಪೂಜೆ, ಗಣಪತಿಹವನ, ೧೦ಕ್ಕೆ ನವಕಾಭಿಷೇಕ, ತುಲಾಭಾರಸೇವೆ, ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ, ೧ ಗಂಟೆಗೆ ಯಕ್ಷಗಾನ ತಾಳಮದ್ದಳ,ಸಂಜೆ ೬ಕ್ಕೆ ದೀಪಾರಾಧನೆ, ತಾಯಂಬಕ, ೬.೩೦ರಿಂದ ಎಸ್‌ಕೆಎಸ್ ಸ್ವರ ಸಂಗಮ ಪುತ್ತಿಗೆ ಇವರಿಂದ ಭಕ್ತಿರಸಮಂಜರಿ, ರಾತ್ರಿ ೭.೩೦ಕ್ಕೆ ಮಹಾಪೂಜೆ, ಶ್ರೀ ದೇವರ ರಾಜಾಂ ಗಣ ಪ್ರವೇಶ, ಶ್ರೀ ಕಿನ್ನಿಮಾಣಿ-ಪೂಮಾಣಿ ದೈವಸ್ಥಾನದಲ್ಲಿ ತಂಬಿಲ, ೧೫ರಂದು ಬೆಳಿಗ್ಗೆ ೯ಕ್ಕೆ ಶ್ರೀ ದೇವರ ರಾಜಾಂಗಣ ಪ್ರವೇಶ ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ಮಂತ್ರಾಕ್ಷತೆ, ಅನ್ನಸಂತರ್ಪಣೆ ನಡೆಯಲಿದೆ.