ಪೆರಿಂಗಡಿಯಲ್ಲಿ ಕಡಲ್ಕೊರೆತ ವ್ಯಾಪಕ : ಹಲವು ಮರಗಳು, ರಸ್ತೆ ಬದಿ ಸಮುದ್ರ ಪಾಲ
ಉಪ್ಪಳ: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಬಿರುಸಿನ ಮಳೆಗೆ ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ವಿವಿಧ ಕಡೆಗಳ ತೀರ ಪ್ರದೇಶದಲ್ಲಿ ಕಡಲ್ಕೊರೆತ ತೀವ್ರಗೊಂಡಿದೆ. ಪೆರಿಂಗಡಿ ಯಲ್ಲಿ ನಿನ್ನೆ ರಾತ್ರಿ ತೀವ್ರ ಕಡಲ್ಕೊರೆತ ಕಂಡು ಬಂದಿದ್ದು, ಹಲವಾರು ಮರ ಹಾಗೂ ಪೆರಿಂಗಡಿ ರಸ್ತೆ ಬದಿ ನೀರುಪಾಲಾಗಿದೆ.ಈ ರಸ್ತೆಯು ಸಂಪೂರ್ಣ ಸಮುದ್ರಪಾಲಾಗುವ ಭೀತಿ ಇದ್ದು, ಹಾಗಾದರೆ ಈ ಪ್ರದೇಶದ ಜನರು ಸಂಕಷ್ಟ ಅನುಭವಿಸಬೇಕಾಗಿ ಬರಲಿದೆ.
ನಿನ್ನೆ ರಾತ್ರಿ ಹಲವು ಮರಗಳು ಬಿದ್ದಿದ್ದು, ವಿದ್ಯುತ್ ತಂತಿಗಳಿಗೂ ಹಾನಿಯಾಗಿದೆ. ವಿದ್ಯುತ್ ವಿಚ್ಛೇಧಿಸ ಲಾಗಿದೆ. ಸ್ಥಳಕ್ಕೆ ವಿದ್ಯುತ್ ಇಲಾಖೆ ಅಧಿಕಾರಿಗಳು, ಅಗ್ನಿಶಾಮಕಗಳು ತಲುಪಿತ್ತು. ಸ್ಥಳೀಯರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ರಸ್ತೆಯನ್ನು ದಾಟಿ ಸಮುದ್ರ ನೀರು ಹರಿದರೆ ತಗ್ಗು ಪ್ರದೇಶವಾಗಿದ್ದು, ಇಲ್ಲಿ ಹಲವಾರು ಮನೆಗಳಿವೆ. ಇನ್ನು ಕಡಲ್ಕೊರೆತ ಮುಂದುವರಿದಲ್ಲಿ ಇವರೆಲ್ಲ ಇಲ್ಲಿಂದ ತೆರಳಬೇಕಾದ ಸ್ಥಿತಿ ಉಂಟಾಗಬಹುದೆಂಬ ಭೀತಿ ಸ್ಥಳೀಯರು ವ್ಯಕ್ತಪಡಿಸಿದ್ದಾರೆ.