ಪೆರ್ಣೆಯಲ್ಲಿ ಕಳಿಯಾಟ ಮಹೋತ್ಸವ ಸಂಪನ್ನ
ಸೀತಾಂಗೋಳಿ: ಶ್ರೀ ಪೆರ್ಣೆ ಮುಚ್ಚಿಲೋಟ್ ಭಗವತಿ ಕ್ಷೇತ್ರದಲ್ಲಿ ಕಳಿಯಾಟ ಮಹೋತ್ಸವ ಸಂಪನ್ನಗೊಂಡಿತು. ಈ ತಿಂಗಳ ೧ರಿಂದ ಕಳಿಯಾಟ ಮಹೋತ್ಸವ ಆರಂಭಗೊಂಡಿತ್ತು ನಿನ್ನೆ ವರೆಗೆ ಏಳುದಿನಗಳಲ್ಲಿ ಪುಲ್ಲೂರು ಕಣ್ಣನ್ ದೈವ, ಕಣ್ಣಂಗಾಟ್ ಭಗವತಿ, ಪುಲ್ಲೂರು ಕಾಳಿ ದೈವ, ಶ್ರೀ ವಿಷ್ಣುಮೂರ್ತಿ, ಶ್ರೀ ಬೀರ್ಣಾಳ್ವ ಮೊದಲಾದ ದೈವಗಳ ನರ್ತನ ನಡೆಯಿತು.
ಕೊನೆಯ ದಿನವಾದ ನಿನ್ನೆ ನರಂಬಿಲ್ ಭಗವತಿ ದೈವದ ನರ್ತನ, ಪುಲ್ಲೂರ್ಕಾಳಿ ದೈವದ ನರ್ತನ, ತೀಪಾತಿ ದೈವದ ನರ್ತನ, ಅಗ್ನಿಸೇವೆ, ಶ್ರೀ ಮುಚ್ಚಿಲೋಡ್ ಭಗವತಿ ಅಮ್ಮನವರ ಸಿರಿಮುಡಿ ದರ್ಶನ, ಪುಲ್ಲೂರ್ಕಾಳಿ ದೈವದೊಂದಿಗೆ ಭೇಟಿ ಬಳಿಕ ಪ್ರಸಾದ ವಿತರಣೆಯಾಯಿತು. ಕಾಸರಗೋಡು, ದಕ್ಷಿಣಕನ್ನಡ, ಉಡುಪಿ, ಕೊಡಗು ಸಹಿತ ವಿವಿಧ ಜಿಲ್ಲೆಗಳ ವಾಣಿಯ-ಗಾಣಿಗ ಸಮಾಜ ಬಾಂಧವರು, ಕೇರಳ, ಕರ್ನಾಟಕದ ಹಲವರು ಜನಪ್ರತಿನಿಧಿಗಳು ಸಹಿತ ಸಹಸ್ರಾರು ಮಂದಿ ಕ್ಷೇತ್ರಕ್ಕಾಗಮಿಸಿ ದೈವಗಳ ದರ್ಶನ ಪಡೆದರು.