ಪೆರ್ಲ ನಾಲಂದ ಕಾಲೇಜಿನಲ್ಲಿ ಕಾರ್ಗಿಲ್ ವಿಜಯ ದಿನಾಚರಣೆ

ಪೆರ್ಲ: ಪೆರ್ಲ ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕ ಸಂಖ್ಯೆ- 49 ಆಶ್ರಯದಲ್ಲಿ ಕಾರ್ಗಿಲ್ ವಿಜಯ ದಿನ ಆಚರಿಸಲಾಯಿತು. ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಅನುಪಮ ಟಿ.ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ, 25 ವರ್ಷಗಳ ಹಿಂದೆ, ಭಾರತೀಯ ಸೈನ್ಯ ಪಾಕಿಸ್ತಾನಿ ನುಸುಳುಕೋರರನ್ನು ಸದೆ ಬಡಿಯುವ ಮೂಲಕ ತನ್ನ ಪರಾಕ್ರಮವನ್ನು ಇಡೀ ಜಗತ್ತಿಗೆ ಸಾರಿತ್ತು.
ಈ ದಿನವು ಭಾರತದ ಇತಿಹಾಸದಲ್ಲಿ ದೇಶದ ಸೇನೆಯ ಶೌರ್ಯ ಮತ್ತು ಧೈರ್ಯದ ಕಥೆಯನ್ನು ನೆನಪಿಸುತ್ತದೆ. ಪಾಕಿಸ್ತಾನಿ ಸೇನೆಯು ಭಾರತದ ಭೂಪ್ರದೇಶದೊಳಗೆ ನುಗ್ಗಿ ಕಾರ್ಗಿಲï‌ನ ಎತ್ತರದ ಸ್ಥಳಗಳನ್ನು ವಶಪಡಿಸಿಕೊಂಡಿತು. ಈ ದಿನವನ್ನು ದೇಶದಲ್ಲಿ ವಿಜಯ್ ದಿವಸ್ ಎಂದೇ ಆಚರಿಸಲಾಗುತ್ತಿದೆ ಎಂದು ತಿಳಿಸಿದರು. ಎನ್ನೆಸ್ಸೆಸ್ ಯೋಜನಾಧಿಕಾರಿ ರೆಜೀಶ ಅಧ್ಯಕ್ಷತೆ ವಹಿಸಿದ್ದರು. ಸ್ವಯಂಸೇವಕಿ ಶಾಲಿನಿ ಸ್ವಾಗತಿಸಿ, ಶ್ರೀಶ್ಮ ವಂದಿಸಿದರು. ಸ್ವಯಂ ಸೇವಕಿ ಖದೀಜತುಲ್ ಝಿನಾನ ನಿರೂಪಿಸಿದರು.

RELATED NEWS

You cannot copy contents of this page