ಪೇಟತುಳ್ಳಲ್ ವೇಳೆ ಅಯ್ಯಪ್ಪ ಭಕ್ತನ ಬ್ಯಾಗ್ ಕತ್ತರಿಸಿ ಹಣ ಕಳವು: ಮೂವರ ಬಂಧನ
ಎರುಮೇಲಿ: ಅಯ್ಯಪ್ಪ ಭಕ್ತನ ಶೋಲ್ಡರ್ ಬ್ಯಾಗ್ ಕತ್ತರಿಸಿ 14 ಸಾವಿರ ರೂಪಾಯಿ ಕಳವು ನಡೆಸಿದ ಮೂರು ಮಂದಿಯನ್ನು ಬಂಧಿಸ ಲಾಗಿದೆ. ತಮಿಳುನಾಡು ಉತ್ತಮಪಾ ಳಯಂ ನಿವಾಸಿ ಪಳನಿಸ್ವಾಮಿ (45), ಡಿಂಡಿಗಲ್ ನಿವಾಸಿ ಮುರುಗನ್ (58), ಕುಮಳಿಯ ಭಗವತಿ (52) ಎಂಬಿವರನ್ನು ಎರುಮೇಲಿ ಪೊಲೀಸರು ಬಂಧಿಸಿದ್ದಾರೆ. ನಿನ್ನೆ ಮುಂಜಾನೆ ಎರುಮೇಲಿಯಿಂದ ಪೇಟತುಳ್ಳಲ್ ನಡೆಸುತ್ತಿದ್ದ ವೇಳೆ ಅನ್ಯರಾಜ್ಯದ ತೀರ್ಥಾಟಕನ ಬ್ಯಾಗ್ ಕತ್ತರಿಸಿ ಅದರಲ್ಲಿದ್ದ ಹಣವನ್ನು ಕಳವು ನಡೆಸಲಾಗಿತ್ತು. ಈ ಬಗ್ಗೆ ತೀರ್ಥಾಟಕ ಎರುಮೇಲಿ ಪೊಲೀಸರಿಗೆ ದೂರು ನೀಡಿದ್ದರು. ಸಿಸಿ ಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಕಳ್ಳರ ಕುರಿತು ಸೂಚನೆ ಲಭಿಸಿತ್ತು. ಇದರಂತೆ ಎರುಮೇಲಿ ಪೊಲೀಸ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಒಳಗೊಂಡ ಸ್ಕ್ವಾಡ್ ಕಳ್ಳರನ್ನು ಬಂಧಿಸಿದೆ. ಶಬರಿಮಲೆ ತೀರ್ಥಾಟ ಕರ ಹಣ ದೋಚುವ ಉದ್ದೇಶದಿಂ ದಲೇ ಈ ಮೂರು ಮಂದಿ ಎರುಮೇ ಲಿಗೆ ತಲುಪಿದ್ದರೆಂದು ತಿಳಿದುಬಂದಿದೆ.