ಪೈವಳಿಕೆಯಲ್ಲಿ ಬ್ಯಾಂಕ್ ಸಾಲ ಅದಾಲತ್
ಪೈವಳಿಕೆ: ಪೈವಳಿಕೆ ಪಂಚಾಯತ್ಗೆÀÆಳಪಟ್ಟ ಪೈವಳಿಕೆ ಗ್ರೂಪ್ , ಕಯ್ಯಾರ್ ಗ್ರೂಪ್, ಬಾಯಾರ್ ಗ್ರಾಮಗಳ ಬ್ಯಾಂಕ್ ಲೋನ್ ಅದಾಲತ್ತನ್ನು ಪೈವಳಿಕೆ ಪಂಚಾಯತ್ ಕುಟುಂಬಶ್ರೀ ಹಾಲಿನಲ್ಲಿ ನಡೆಸಲಾಯಿತು. ಅದಾಲತ್ನಲ್ಲಿ ರೆವನ್ಯೂ ರಿಕವರಿಗೆ ಸೇರಿದ 15 ರಷ್ಟು ಬ್ಯಾಂಕ್ ಸಾ¯ ಕೇಸುಗಳಲ್ಲಿ ತೀರ್ಪು ಕಲ್ಪಿಸಲಾಯಿತು. ಡೆಪ್ಯುಟಿ ತಹಶೀಲ್ದಾರ್ ಪ್ರಶಾಂತನ್.ವಿ, ಪೈವಳಿಕೆ ಗ್ರೂಪ್ ವಿಲ್ಲೇಜ್ ಆಫೀಸರ್ ಮೊಯ್ದೀನ್ ಕುಞ್ಞ.ಬಿ , ಬಾಯಾರ್ ವಿಲ್ಲೇಜ್ ಆಫೀಸರ್ ಶಂಕರ, ಪೈವಳಿಕೆ ಗ್ರೂಪ್, ಕಯ್ಯಾರ್ ಗ್ರೂಪ್, ಬಾಯಾರ್ ವಿಲ್ಲೇಜ್ ಆಫೀಸುಗಳ ವಿ.ಎಫ್.ಎ ಗಳಾದ ಬೈಜು ಟಿ.ಪಿ,ಮೊಹಮ್ಮದ್ ಶಹೀಂ,ಆನAದ್ ರಾಜ್ ಕೆ.ಎಸ್,ಕೇರಳ ಗ್ರಾಮೀಣ ಬ್ಯಾಂಕ್, ಸಜಂಕಿಲ, ಜೋಡುಕಲ್ಲು, ಪೆರ್ಮುದೆ ಶಾಖಾ ಮೆನೇಜರುಗಳಾದ ವೈಶಾಕ್. ಎಸ್,ಚಂದನ್ ಕುಮಾರ್, ಗಂಗಾಧರ, ಕೆನರಾ ಪೈವಳಿಕೆ ಶಾಖಾ ಸೀನಿಯರ್ ಮೆನೇಜರ್ ಮಹಾ ಗಣೇಶ.ಕೆ, ಫೆಡರಲ್ ಬ್ಯಾಂಕ್ ಉಪ್ಪ ಳ ಶಾಖಾ ಅಸಿಸ್ಟೆಂಟ್ ಮೆನೇಜರ್ ವಿಪಿನ್.ವಿ ನೇತೃತ್ವ ನೀಡಿದರು.