ಪೋಕ್ಸೋ ಪ್ರಕರಣ: ಹೇಳಿಕೆ ಬದಲಿಸದಿದ್ದಲ್ಲಿ ಸಂತ್ರಸ್ತೆ ಸಹಿತ ಕುಟುಂಬಕ್ಕೆ ಕೊಲೆ ಬೆದರಿಕೆ; ಹಲವು ಪ್ರಕರಣಗಳಲ್ಲಿ ಆರೋಪಿಯಾದ ಯುವಕ ಬಂಧನ
ಕುಂಬಳೆ: ಪೋಕ್ಸೋ ಪ್ರಕರಣದ ವಿಚಾರಣೆ ವೇಳೆ ಹೇಳಿಕೆ ಬದಲಿಸದಿ ದ್ದಲ್ಲಿ ಸಂತ್ರಸ್ತೆ ಹಾಗೂ ಕುಟುಂಬವನ್ನು ಕೊಲೆಗೈಯ್ಯುವುದಾಗಿ ಬೆದರಿಕೆಯೊಡ್ಡಿದ ಆರೋಪದಂತೆ ಹಲವು ಪ್ರಕರಣಗಳಲ್ಲಿ ಆರೋಪಿಯಾದ ಯುವಕನ ವಿರುದ್ಧ ಜಾಮೀನು ರಹಿತ ಕಾಯ್ದೆ ಪ್ರಕಾರ ಪೊಲೀಸರು ಕೇಸು ದಾಖಲಿಸಿಕೊಂ ಡು ಆತನನ್ನು ಬಂಧಿಸಿದ್ದಾರೆ. ಬಂಬ್ರಾಣ ಬಯಲಿನ ವರುಣ್ ರಾಜ್ ಶೆಟ್ಟಿ (30) ಎಂಬಾತನನ್ನು ಕುಂಬಳೆ ಪೊಲೀಸ್ ಇನ್ ಸ್ಪೆಕ್ಟರ್ ಕೆ.ಪಿ. ವಿನೋದ್ ಕುಮಾರ್ ಹಾಗೂ ತಂಡ ಇಂದು ಬೆಳಿಗ್ಗೆ ಬಂಧಿಸಿದೆ.
ವರುಣ್ ರಾಜ್ ಶೆಟ್ಟಿಯ ಸಹೋ ದರನೂ ಕಾಪಾ ಪ್ರಕರಣದಲ್ಲಿ ಸೆರೆಗೀ ಡಾಗಿ ರಿಮಾಂಡ್‌ನಲ್ಲಿರುವ ಕಿರಣ್ ರಾಜ್ ಶೆಟ್ಟಿ ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ. 2018ರಲ್ಲಿ ಕುಂಬಳೆ ಪೊಲೀಸರು ದಾಖಲಿಸಿಕೊಂಡ ಈ ಪ್ರಕರಣದ ವಿಚಾರಣೆ ಕಾಸರಗೋಡು ನ್ಯಾಯಾಲಯದಲ್ಲಿ ಆರಂಭಗೊಂಡಿ ರುತ್ತದೆ. ಈಮಧ್ಯೆ ವರುಣ್ ರಾಜ್ ಶೆಟ್ಟಿ ತನ್ನ ಸಹೋದರನಿಗೆ ಅನುಕೂಲ ವಾಗಿ ಹೇಳಿಕೆ ನೀಡದಿದ್ದಲ್ಲಿ ಸಂತ್ರಸ್ತೆ ಹಾಗೂ ಕುಟುಂಬವನ್ನು ಕೊಲೆಗೈಯ್ಯು ವುದಾಗಿ ಬೆದರಿಕೆಯೊಡ್ಡಿದ್ದಾನೆ. ಈ ವಿಷಯವನ್ನು ಸಂತ್ರಸ್ತೆ ನಿನ್ನೆ ನ್ಯಾಯಾ ಲಯದಲ್ಲಿ ತಿಳಿಸಿದ್ದಳು. ಇದರಂತೆ ನ್ಯಾಯಾಲಯದ ನಿರ್ದೇಶ ಪ್ರಕಾರ ವರುಣ್ ರಾಜ್ ಶೆಟ್ಟಿ ವಿರುದ್ಧ ಪೊಲೀ ಸರು ಕೇಸು ದಾಖಲಿಸಿಕೊಂಡಿದ್ದಾರೆ. ಆರೋಪಿ ಊರಿನಿಂದ ಪರಾರಿಯಾ ಗಲು ಸಾಧ್ಯತೆಯಿದೆಯೆಂಬ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಇನ್‌ಸ್ಪೆಕ್ಟರ್ ಕೆ.ಪಿ. ವಿನೋದ್ ಕುಮಾರ್, ಪೊಲೀಸರಾದ ವಿನೋದ್ ಕುಮಾರ್. ಸುಭಾಷ್ ಎಂಬವರು ಇಂದು ಬೆಳಿಗ್ಗೆ ಮನೆಗೆ ಸುತ್ತುವರಿದು ಶೋಧ ನಡೆಸಿದ್ದರೂ ಪತ್ತೆಹಚ್ಚಲಾ ಗಲಿಲ್ಲ.
ಬೆಳಿಗ್ಗೆ ೬ ಗಂಟೆ ವೇಳೆ ಪೊಲೀಸರಾದ ವಿನೋದ್ ಕುಮಾರ್ ಹಾಗೂ ಸುಭಾಷ್ ಮಫ್ತಿಯಲ್ಲಿ ಮನೆ ಪರಿಸರದಲ್ಲಿ ಕಾದು ನಿಂತಿದ್ದರು. ಈ ವೇಳೆ ಬಟ್ಟೆಬರೆಗಳನ್ನು ಬ್ಯಾಗ್‌ನಲ್ಲಿ ತುಂಬಿಸಿ ಮಂಗಳೂರಿಗೆ ಪರಾರಿ ಯಾಗಲು ಯತ್ನಿಸುತ್ತಿದ್ದ ವೇಳೆ ವರುಣ್ ರಾಜ್ ಶೆಟ್ಟಿಯನ್ನು ಬಂಧಿಸಲಾಗಿದೆ. ಈತನೂ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿ ದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಎಸ್‌ಐ ಕೆ. ಶ್ರೀಜೇಶ್ ತನಿಖೆ ನಡೆಸುತ್ತಿದ್ದಾರೆ.