ಫ್ಯಾಬ್ರಿಕೇಶನ್ ಕಾರ್ಮಿಕ ಕೆಲಸದ ವೇಳೆ ಶಾಕ್ ತಗಲಿ ಮೃತ್ಯು
ಕಾಸರಗೋಡು: ಫ್ಯಾಬ್ರಿಕೇಶನ್ ನೌಕರ ಕೆಲಸದ ವೇಳೆ ಶಾಕ್ ತಗಲಿ ಮೃತಪಟ್ಟ ದಾರುಣ ಘಟನೆ ನಡೆದಿದೆ. ಅಡ್ಕತ್ತಬೈಲು ಗುಡ್ಡೆ ದೇವಸ್ಥಾನ ರಸ್ತೆಯ ನಿವಾಸಿ ರವಿ ಎಂಬವರ ಪುತ್ರ ರಾಜೇಶ್ (32) ಎಂಬವರು ಮೃತಪಟ್ಟ ದುರ್ದೈವಿಯಾಗಿದ್ದಾರೆ. ನಿನ್ನೆ ಸಂಜೆ ೭.೩೦ರ ವೇಳೆ ಉಪ್ಪಳ ಬಳಿಯ ಜನಪ್ರಿಯ ಎಂಬಲ್ಲಿನ ಅರೇಬಿಯನ್ ಮೆಕ್ಸಿಕೋ ಹೋಟೆಲ್ನಲ್ಲಿ ಈ ದುರ್ಘಟನೆ ನಡೆ ದಿದೆ. ಕೆಲಸ ವೇಳೆ ಶಾಕ್ ತಗಲಿ ಬಿದ್ದ ರಾಜೇ ಶ್ರನ್ನು ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.
ಮೃತರು ತಂದೆ, ತಾಯಿ ಸುಜಾತಾ, ಪತ್ನಿ ಅಶ್ವಿನಿ, ಪುತ್ರ ಯಶ್ವಿನ್ರಾಜ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ರಾಜೇಶ್ರ ಅಕಾಲಿಕ ನಿಧನ ನಾಡಿನಲ್ಲಿ ಶೋಕಸಾಗರ ಸೃಷ್ಟಿಸಿದೆ.