ಬಂದ್ಯೋಡಿನಲ್ಲಿ ಬಿಜೆಪಿಯಿಂದ ಜನ ಪಂಚಾಯತ್ ಸಾರ್ವಜನಿಕ ಸಭೆ
ಉಪ್ಪಳ: ಬಿಜೆಪಿ ಮಂಗಲ್ಪಾಡಿ ಪಂಚಾಯತ್ ಸಮಿತಿ ಆಶ್ರಯದಲ್ಲಿ ಜನಪಂಚಾAiÀiತ್, ಸಾರ್ವಜನಿಕ ಸಭೆ ಬಂದ್ಯೋಡ್‌ನಲ್ಲಿ ಜರುಗಿತು. ಬಿಜೆಪಿ ರಾಜ್ಯ ಉಪಾಧ್ಯಕ್ಷ ಪ್ರಕಾಶ್ ಬಾಬು ಉದ್ಘಾಟಿಸಿ, ಮೋದಿ ನೇತೃತ್ವದ ಕೇಂದ್ರ ಸರಕಾರದ ಯೋಜನೆಗಳನ್ನು ವಿವರಿಸಿ, ಕೇರಳ ಸರಕಾರದ ಜನ ವಿರೋಧಿ ನೀತಿಯನ್ನು ಖಂಡಿಸಿದರು, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರ್ ರೈ, ರಾಜ್ಯ ಸಮಿತಿ ಸದಸ್ಯ ನ್ಯಾಯವಾದಿ ಬಾಲಕೃಷ್ಣ ಶೆಟ್ಟಿ,ಕೊಳಾರು ಸತೀಶ್ಚಂದ್ರ ಭಂಡಾರಿ, ಮಂಡಲ ಪ್ರಧಾನ ಕಾರ್ಯದರ್ಶಿ ವಸಂತ ಕುಮಾರ ಮಯ್ಯ, ಜಿಲ್ಲಾಸಮಿತಿ ಸದಸ್ಯರಾದ ಬಾಬು ಕೆ,ಜಯಂತಿ ಶೆಟ್ಟಿ, ಮುರಳೀಧರ ಯಾದವ, ಉಪಸ್ಥಿತ ರಿದ್ದರು ,ಬಿಜೆಪಿ ಅಧ್ಯಕ್ಷರಾದ ರಾಮಚಂದ್ರ ಬಲ್ಲಾಳ್ ಅಧ್ಯಕ್ಷತೆ ವಹಿಸಿದ್ದರು,ಪ್ರಧಾನ ಕಾರ್ಯದರ್ಶಿ ಕಿಶೋರ್ ಬಂದ್ಯೋಡು ಸ್ವಾಗತಿಸಿ, ದಿನೇಶ್ ಮುಳಿಂಜ ವಂದಿಸಿದರು.