ಬದಿಯಡ್ಕ ಸೇವಾ ಭಾರತಿ ಸಮಿತಿ ರೂಪೀಕರಣ
ಬದಿಯಡ್ಕ: ಸೇವಾ ಭಾರತಿ ಬದಿಯಡ್ಕ ಪಂಚಾಯತ್ ಮಟ್ಟದ ಸಮಿತಿ ರೂಪೀಕರಣ ಬದಿಯಡ್ಕದಲ್ಲಿ ಜರಗಿತು. ಸೇವಾ ಭಾರತಿ ಕಾಸರಗೋಡು ಜಿಲ್ಲಾ ಉಪಾಧ್ಯಕ್ಷ ಅಶೋಕನ್ ಟಿ.ವಿ. ಉದ್ಘಾಟಿಸಿ ಶುಭಹಾರೈಸಿದರು.
ಜಿಲ್ಲಾ ಸೇವಾ ಪ್ರಮುಖ್ ಮಂಜುನಾಥ ಕಾರ್ಲೆ, ಬದಿಯಡ್ಕ ಖಂಡ್ ಸಹಕಾರ್ಯವಾಹ ರಾಜೇಶ್ ವಳಮಲೆ, ಜಿಲ್ಲಾ ಸಮಿತಿ ಜೊತೆ ಕಾರ್ಯದರ್ಶಿ ಪ್ರತೀಕ್ ಆಳ್ವ ಪೆರಡಾಲ, ಪಂಚಾಯತ್ ಸಮಿತಿ ಅಧ್ಯಕ್ಷ ಸದಾಶಿವ ಮಾಸ್ಟರ್ ಬೇಳ, ಬದಿಯಡ್ಕ ಖಂಡ್ ಸೇವಾ ಪ್ರಮುಖ್ ಗಣೇಶ್ ಪೆರ್ಲ ಹಾಗೂ ಸಮಿತಿ ಸದಸ್ಯರು ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು. ಬಾಲಸುಬ್ರಹ್ಮಣ್ಯ ಭಟ್ ಸ್ವಾಗತಿಸಿ, ವಕೀಲ ಗಣೇಶ್ ಬಿ. ವಂದಿಸಿದರು.