ಬದಿಯಡ್ಕದಲ್ಲಿ ಕಯ್ಯಾರರ 109ನೇ ಜನ್ಮ ದಿನಾಚರಣೆ
ಕಾಸರಗೋಡು : ಖ್ಯಾತ ಕವಿ,ಕನ್ನಡ ಹೋರಾಟಗಾರ ನಾಡೋಜ ಕಯ್ಯಾರ ಕಿಞ್ಞಣ್ಣ ರೈ ಅವರ 109ನೇ ಜನ್ಮದಿನಾಚರಣೆಯು ನಾಳೆ ಅಪರಾಹ್ನ 2.30 ಕ್ಕೆ ಸಮತಾ ಸಾಹಿತ್ಯ ವೇದಿಕೆಯ ಆಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಸಹಯೋಗದಲ್ಲಿ ಬದಿಯಡ್ಕ ಬೋಳುಕಟ್ಟೆಯ ಹಿರಿಯ ನಾಗರಿಕರ ವಿಶ್ರಾಂತಿ ಗೃಹ ‘ಹಗಲು ಮನೆ’ಯಲ್ಲಿ ನಡೆಯಲಿದೆ.
ನಿವೃತ್ತ ಮುಖ್ಯ ಶಿಕ್ಷಕ ಪಿಲಿಂ ಗಲ್ಲು ಕೃಷ್ಣಭಟ್ ಅಧ್ಯಕ್ಷತೆ ವಹಿಸ ಲಿದ್ದು ನಿವೃತ್ತ ಪ್ರಾಂಶುಪಾಲ ಡಾ. ಬೇ.ಸಿ ಗೋಪಾಲಕೃಷ್ಣ ಕಯ್ಯಾರರ ಬದುಕು-ಬರಹಗಳ ಕುರಿತು ಉಪನ್ಯಾಸ ನೀಡುವರು. ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ, ರಂಗಸಿರಿ ಸಾಂಸ್ಕೃತಿಕ ವೇದಿಕೆಯ ಕಾರ್ಯ ದರ್ಶಿ ಡಾ. ಶ್ರೀಶ ಕುಮಾರ ಪಂಜಿ ತ್ತಡ್ಕ ಶುಭ ಹಾರೈಸುವರು. ಬಳಿಕ ಕಯ್ಯಾರ ಕಿಞ್ಞಣ್ಣ ರೈ ಅವರ ಕಾವ್ಯಗಳ ವಾಚನ ಮತ್ತು ಗಾಯನ ನಡೆಯು ವುದು. ಹಿರಿಯ ಸಾಹಿತಿ ರಾಧಾಕೃಷ್ಣ ಕೆ. ಉಳಿಯತ್ತಡ್ಕ, ವನಜಾಕ್ಷಿ ಚಂಬ್ರಕಾನ, ದಿವ್ಯಾಗಟ್ಟಿ ಪರಕ್ಕಿಲ, ಚಂದ್ರಕಲಾ ನೀರಾಳ, ವಸಂತ ಬಾರಡ್ಕ, ಸುಜಾತ ಕನಿಯಾಲ, ಬಬಿತಾ ಆಚಾರ್ಯ, ಜಯ ಮಣಿಯಂಪಾರೆ ಕಾವ್ಯ ವಾಚನ ಮಾಡುವರು.