ಬಸ್ ಚಾಲಕನಿಗೆ ಹಲ್ಲೆ: ಯುವಕ ಸೆರೆ
ಕಾಸರಗೋಡು: ಬೈಕ್ ಹಾದು ಹೋಗಲು ದಾರಿ ಬಿಟ್ಟು ಕೊಡಲಿಲ್ಲ ವೆಂದು ಆರೋಪಿಸಿ ಖಾಸಗಿ ಬಸ್ ಚಾಲಕನ ಮೇಲೆ ಹಲ್ಲೆ ನಡೆಸಿದ ಪ್ರಕರಣದ ಆರೋಪಿಯನ್ನು ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ. ನೆಕ್ರಾಜೆ ಪೈಕದ ಮೊಹಮ್ಮದ್ ಅನಾಫ್ (32) ಬಂಧಿತ ಯುವಕ.ಕಾಸರಗೋಡು- ಕುಟ್ಟಿಕ್ಕೋಲ್ ರೂಟ್ನಲ್ಲಿ ಸೇವೆ ನಡೆಸುತ್ತಿರುವ ಖಾಸಗಿ ಬಸ್ಸೊಂದರ ಚಾಲಕ ಎರಿಞ್ಞಪುಳದ ಸತೀಶ್ ಕುಮಾರ್ರ ಮೇಲೆಹಲ್ಲೆ ನಡೆಸಿದ ದೂರಿ ನಂತೆ ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದು, ಅದಕ್ಕೆ ಸಂಬಂ ಧಿಸಿ ಈ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಮೊನ್ನೆ ಸಂಜೆ ಬಸ್ ಕಾಸರ ಗೋಡಿಗೆ ಬರುತ್ತಿದ್ದ ದಾರಿ ಮಧ್ಯೆ ಚೆಂಗಳ ನಾಲ್ಕನೇ ಮೈಲಿನಲ್ಲಿ ಬೈಕ್ಗೆ ಸೈಡ್ ಕೊಟ್ಟಿಲ್ಲ ವೆಂದು ಆರೋಪಿಸಿ, ಬೈಕ್ ಸವಾರನಾಗಿರುವ ಯುವಕ ಹೆಲ್ಮೆಟ್ನಿಂದ ಬಸ್ ಚಾಲಕನಿಗೆ ಹೊಡೆದು ಗಾಯಗೊಳಿಸಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಲಾಗಿದೆ.