ಬಾಕಿ ಹಣ ಕೇಳಿದುದಕ್ಕೆ ಯುವಕನಿಗೆ ಹಲ್ಲೆ: ಓರ್ವನ ವಿರುದ್ಧ ಕೇಸು
ಬದಿಯಡ್ಕ: ಪಕ್ಷಿಗೂಡು ನಿರ್ಮಿಸಿದ ವತಿಯಿಂದ ನೀಡಲು ಬಾಕಿಯಿದ್ದ ಹಣ ಕೇಳಿದ ಯುವಕನ ಮೇಲೆ ಹಲ್ಲೆ ನಡೆಸಿದ ಬಗ್ಗೆ ಬದಿಯಡ್ಕ ಪೊಲೀಸರಿಗೆ ದೂರು ನೀಡಲಾಗಿದೆ. ನೀರ್ಚಾಲು ಶಾಂತಿಪಳ್ಳ ನಿವಾಸಿ ವಸಂತ ಕುಮಾರ್ ಪಿ (32) ಎಂಬವರು ಈ ಬಗ್ಗೆ ದೂರು ನೀಡಿದ್ದು, ಅದರಂತೆ ಗೋಳಿಯಡ್ಕದ ಸಕೀರ್ ಎಂಬಾತನ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಶಕೀರ್ಗೆ ನಾನು ಪಕ್ಷಿ ಗೂಡು ನಿರ್ಮಿಸಿಕೊಟ್ಟಿದ್ದೆನೆಂದೂ ಆತ ಆ ವತಿಯಂದ ನನಗೆ 35,000 ರೂ. ನೀಡಲು ಬಾಕಿಯಿತ್ತು. ಅದನ್ನು ನಾನು ದ. 11ರಂದು ಬೆಳಿಗ್ಗೆ ಕೇಳಿದ್ದೆ. ಆ ದ್ವೇಷದಿಂದ ಆತ ಕೋಳಿಯಡ್ಕದಲ್ಲಿ ತನ್ನ ಮೇಲೆ ಹಲ್ಲೆ ನಡೆಸಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ವಸಂತ ಕುಮಾರ್ ಆರೋಪಿಸಿದ್ದಾರೆ.