ಬಾಲಕಿ ಮುಂದೆ ಅಶ್ಲೀಲ ವರ್ತನೆ: ಆರೋಪಿ ಸೆರೆ

ಕಾಸರಗೋಡು: ತಾಯಿ ಜೊತೆ ಬರುತ್ತಿದ್ದ ಹತ್ತರ ಹರೆಯದ ಬಾಲಕಿಯ ಮುಂದೆ ಅಶ್ಲೀಲ ರೀತಿಯಲ್ಲಿ ವರ್ತಿಸಿದ ಪ್ರಕರಣದ ಆರೋಪಿಯನ್ನು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ. ಬದಿಯಡ್ಕ ನೀರ್ಚಾಲ್ ಗೋಳಿಯಡ್ಕ ನಿವಾಸಿ ಮೊಹ ಮ್ಮದ್ ಜಿ ಅಲಿಯಾಸ್ ಶಾಫಿ (28) ಎಂಬಾತನನ್ನು ಈ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲಾಗಿದೆ. ಹೊಸದುರ್ಗ ಪುದಿಯಕೋಟೆಯಲ್ಲಿ ತಾಯಿ ಜೊತೆ ಬರುತ್ತಿದ್ದ ಬಾಲಕಿಯ ಮುಂದೆ ಅಶ್ಲೀಲ ರೀತಿಯಲ್ಲಿ ವರ್ತಿಸಿದ್ದ ದೂರಿನಂತೆ ಪೊಲೀಸರು ಆತನ ವಿರುದ್ಧ ಪೋಕ್ಸೋ ಕಾನೂನು ಪ್ರಕಾರ ಪ್ರಕರಣ ದಾಖಲಿಸಿ ನಂತರ ಅದಕ್ಕೆ ಸಂಬಂಧಿಸಿ ಆತನನ್ನು ಬಂಧಿಸಿದ್ದಾರೆ. ಇದೇ ರೀತಿಯ ಬೇರೊಂದು ಕೇಸು ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ಈ ಆರೋಪಿಯ ಹೆಸರಲ್ಲಿ ದಾಖಲುಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page