ಬಾಳಿಯೂರು: ಅಸಾಸುದ್ದೀನ್ ದಶವಾರ್ಷಿಕ ಆರಂಭ
ಬಾಳಿಯೂರು: ಅಸಾಸುದ್ದೀನ್ ದಶವಾರ್ಷಿಕ ಬದವಿ, ಅದವಿಯ್ಯ ಸೌದ್ ದಾನ ಸಮ್ಮೇಳನ ಇಂದು ಹಾಗೂ ನಾಳೆ ನಡೆಯಲಿದೆಯೆಂದು ಪದಾಧಿಕಾರಿಗಳು ಕುಂಬಳೆ ಪ್ರೆಸ್ ಫಾರಂನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಇಂದು ಬೆಳಿಗ್ಗೆ ಸಿಯಾರತ್, ಧ್ವಜಾರೋಹಣ, ಖತ್ಮುಲ್ ಖುರ್ ಆನ್, ಅಜ್ಮೀರ್ ಮೌಲೀದ್ ಸಯ್ಯಿದ್ ಉಮರಲಿ ಶಿಹಾಬುದ್ದೀನ್ ಅಲ್ ಬುಖಾರಿ ನೇತೃತ್ವ ನೀಡಿದರು. ಬಳಿಕ ಬದವಿ ಮೌಲೀದ್, ಸಂಜೆ 3ಕ್ಕೆ ಆದರ್ಶ ಸಮ್ಮೇಳನ, ರಾತ್ರಿ 7ಕ್ಕೆ ಆತ್ಮೀಯ ಸಮ್ಮೇಳನ ನಡೆಯಲಿದ್ದು, ಸಯ್ಯಿದ್ ಜಲಾಲುದ್ದೀನ್ ಅಲ್ ಬುಖಾರಿ ನೇತೃತ್ವ ನೀಡುವರು. ೮ಕ್ಕೆ ಮಹ್ದಿನರಾವ್. ನಾಳೆ ಬೆಳಿಗ್ಗೆ 7ಕ್ಕೆ ಬದವಿ ಸಂಗಮ, 9ಕ್ಕೆ ಗುರು ಸನ್ನಿಧಿಯಲ್ಲಿ, 10ಕ್ಕೆ ಖತ್ಮುಲ್ ಬುಖಾರಿ ನಡೆಯಲಿದೆ. ಪ್ರಾಸ್ತಾವಿಕ ಸಮ್ಮೇಳನ, ಪ್ರವಾಸಿ ಸಂಗಮ, ಅಪರಾಹ್ನ 2 ಗಂಟೆಗೆ ನಡೆಯಲಿದೆ. 4ಕ್ಕೆ ಸಮಾರೋಪ ಸಮ್ಮೇಳನವನ್ನು ಸಯ್ಯಿದ್ ಕೆ.ಎಸ್. ಆಟ್ಟಕೋಯ ತಂಙಳ್ ಕೊಯಿಲಾಂಡಿ ನಿರ್ವಹಿಸುವರು. ಸಯ್ಯಿದ್ ಶರಫುದ್ದೀನ್ ಅಲ್ ಮುಖೈಬಿಲಿ ಸಮೂಹ ಪ್ರಾರ್ಥನೆಗೆ ನೇತೃತ್ವ ನೀಡುವರು. ಪತ್ರಿಕಾಗೋಷ್ಠಿಯಲ್ಲಿ ಸಯ್ಯಿದ್ ಹಸನ್ ಆರಿಫ್ ಜಾಗರಿ ಅಲ್ ಹಾದಿ ಚೇವಾರ್ ತಂಙಳ್, ಹಾರಿಸ್ ಹನೀಫಿ, ಅಬ್ದುಲ್ ರಸಾಕ್ ಸಅವಿ ಮುಸ್ತಫ ಕಡಂಬಾರ್, ಇಬ್ರಾಹಿಂ ಬದವಿ ಭಾಗವಹಿಸಿದರು.