ಬಾವಿಯ ಆವರಣಗೋಡೆ ಕುಸಿಯುವ ಭೀತಿ: ಕೊಡ್ಯಮ್ಮೆಯಲ್ಲಿ ಆತಂಕ

ಕುಂಬಳೆ: ಕೊಡ್ಯಮ್ಮೆ ಉಜಾರು ಅಂಗನವಾಡಿ ಸಮೀಪವಿರುವ ಬಾವಿ ಅಪಾಯಭೀತಿಯೊಡ್ಡುತ್ತಿದೆ. ಬಾವಿಯ ಆವರಣಗೋಡೆ ಕುಸಿಯುವ ಭೀತಿಯಲ್ಲಿ ರುವುದು ಆತಂಕಕ್ಕೆ ಕಾರಣವಾಗಿದೆ. ಅಂಗನವಾಡಿ ಸಮೀಪ ದಲ್ಲೇ ಗ್ರಂಥಾಲ ಯವೊಂದು ಕಾರ್ಯಾ ಚರಿಸುತ್ತಿದೆ. ಅಂಗನವಾಡಿ ಮಕ್ಕಳು ಹಾಗೂ ಗ್ರಂಥಾಲಯಕ್ಕೆ ತೆರಳುವವರು ಈ ಬಾವಿ ಸಮೀಪದಲ್ಲಾಗಿ ನಡೆದು ಹೋಗಬೇಕಾ ಗುತ್ತಿದೆ. ಆದರೆ ಭದ್ರತೆಯಿಲ್ಲದೆ ಈ ಬಾವಿಯಿಂದ ಅಪಾಯಭೀತಿ ಎದುರಾಗಿ ದೆಯೆಂದು ಸ್ಥಳೀಯರು ತಿಳಿಸುತ್ತಿದ್ದಾರೆ. ಹಲವು ವರ್ಷಗಳ ಹಿಂದೆ ನಿರ್ಮಿಸಿದ ಈ ಸರಕಾರಿ ಬಾವಿಯ ಸುತ್ತ ಮಳೆಗಾಲ ದಲ್ಲಿ ನೀರು ತುಂಬಿಕೊಂಡಿರುವುದೇ ಇದೀಗ ಆವರಣಗೋಡೆ ಕುಸಿಯುವ ಹಂತಕ್ಕೆ ತಲುಪಿದೆ. ಇದನ್ನು ಶೀಘ್ರ ದು ರಸ್ತಿ ನಡೆಸಬೇಕೆಂದು ಒತ್ತಾಯಿಸಿ ನಾಗರಿ ಕರು ಪಂಚಾಯತ್‌ಗೆ ಮನವಿ ಸಲ್ಲಿಸಿದ್ದಾರೆ.

RELATED NEWS

You cannot copy contents of this page