ಬಿ.ಪಿ.ಎಲ್. ಎ.ಎ.ವೈ ರೇಶನ್‌ಕಾರ್ಡ್: ಮಾರ್ಚ್ ೩೧ರೊಳಗೆ ಮಸ್ಟರಿಂಗ್ ಮಾಡಿ, ಇಲ್ಲವಾದಲ್ಲಿ ಎ.೧ರಿಂದ ರೇಶನ್ ಸಾಮಗ್ರಿ ಲಭಿಸದು

ಕಾಸರಗೋಡು: ಬಿಪಿಎಲ್ ಮತ್ತು ಎಎವೈ ಕಾರ್ಡ್ ಹೊಂದಿ ದವರು ಮಾರ್ಚ್ ೩೧ರೊಳಗೆ ಮಸ್ಟರಿಂಗ್ (ಈಗಲೂ ಜೀವಂತ ವಾಗಿದ್ದಾರೆ ಹಾಗೂ ರೇಶನ್ ಸಾಮಗ್ರಿ ಪಡೆಯಲು ಅರ್ಹರು ಎಂಬು ವುದನ್ನು ಖಾತರಿ ಪಡಿಸುವಿಕೆ) ನಡೆಸಬೇಕೆಂದೂ, ಇಲ್ಲವಾದಲ್ಲಿ ಮುಂದಿನ ಎಪ್ರಿಲ್ ೧ರಿಂದ ರೇಶನ್ ಸಾಮಗ್ರಿ ಲಭಿಸದೆಂಬ ಸೂಚನೆ ಸರಕಾರ ನೀಡಿದೆ.

೨೦೨೪ ಜನವರಿ ತಿಂಗಳೊಳಗಾಗಿ ಮಸ್ಟರಿಂಗ್ ನಡೆಸಬೇಕೆಂದು ಕೇಂದ್ರ ಸರಕಾರ ಈ ಹಿಂದೆ ನಿರ್ದೇಶ ನೀಡಿತ್ತು. ಬಳಿಕ ರಾಜ್ಯ ಸರಕಾರ ಮಾಡಿದ ಮನವಿಯಂತೆ ಆ ದಿನಾಂಕವನ್ನು ಮಾರ್ಚ್ ೩೧ರ ತನಕ ಕೇಂದ್ರ ಸರಕಾರ ಮುಂದೂಡಿತ್ತು. ಆದ್ದರಿಂದಾಗಿ ಎ.ಎ.ವೈ ಮತ್ತು  ಬಿಪಿಎಲ್ ಕಾರ್ಡ್‌ದಾರರು ಮಾರ್ಚ್ ೩೧ರೊಳಗಾಗಿ  ಮಸ್ಟರಿಂಗ್ ನಡೆಸಬೇಕು. ಇಲ್ಲವಾದಲ್ಲಿ ಆ ಬಳಿಕ ರೇಶನ್ ಸಾಮಗ್ರಿಗಳು ಲಭಿಸದು.

ಈ ರೇಶನ್ ಕಾರ್ಡ್‌ಗಾರರು ತಮ್ಮ ಆಧಾರ್ ಮತ್ತು ರೇಶನ್ ಕಾರ್ಡ್‌ನೊಂದಿಗೆ ತಮ್ಮ ರೇಶನ್ ಅಂಗಡಿಗಳಿಗೆ ಹೋಗಿ ಅಲ್ಲಿನ ಇ-ಫೋಸ್ ಯಂತ್ರ ಉಪಯೋಗಿಸಿ ಮಸ್ಟರಿಂಗ್ ನಡೆಸಬಹುದು. ಮನೆಯಲ್ಲಿ ಇಲ್ಲದವರ ಹೆಸರಲ್ಲಿ ಉಚಿತವಾಗಿ ವಿತರಿಸಲಾಗುವ ಆಹಾರ ಧಾನ್ಯ ಮತ್ತಿತರ ಸವಲತ್ತುಗಳನ್ನು ಅನರ್ಹರು ಬಳಸುವುದನ್ನು ತಡೆಗಟ್ಟಲು ಇಂತಹ ಮಸ್ಟರಿಂಗ್ ಕ್ರಮವನ್ನು ಕೇಂದ್ರ ಸರಕಾರ ಕಡ್ಡಾಯಗೊಳಿಸಿದೆ.

ರಾಜ್ಯದಲ್ಲಿ ೩೫,೪೯,೫೯೨ ಬಿಪಿಎಲ್ ಕಾರ್ಡ್‌ದಾರರು ಹಾಗೂ ೫,೮೯,೩೬೭ ಎಎವೈ ಕಾರ್ಡ್‌ದಾರರಿ ದ್ದಾರೆ. ಇವರೆಲ್ಲರೂ ಕಡ್ಡಾಯವಾಗಿ ಮಸ್ಟರಿಂಗ್ ನಡೆಸಬೇಕಾಗಿದೆ. ನಿನ್ನೆ ತನಕ ರಾಜ್ಯದಲ್ಲಿ ೨೫೨೨ ಬಿಪಿಎಲ್ ಮತ್ತು ೪೭೯೯ ಎಎವೈ ಕಾರ್ಡ್‌ದಾರರು ಮಸ್ಟರಿಂಗ್ ನಡೆಸಿದ್ದಾರೆ. ಉಳಿದ ರೇಶನ್ ಕಾರ್ಡ್‌ದಾರರು ಇನ್ನಷ್ಟೇ ಮಸ್ಟರಿಂಗ್ ಮಾಡಲು ಬಾಕಿಯಿದೆ.

ಹೀಗೆ ಮಸ್ಟರಿಂಗ್ ನಡೆಸಲು ಬಾಕಿ ಉಳಿದ ರೇಶನ್ ಕಾರ್ಡ್‌ದಾರರು ತಮ್ಮ ರೇಶನ್ ಅಂಗಡಿಗಳಿಗೆ ನೇರವಾಗಿ ಸಂಪರ್ಕಿಸಿ ಮಸ್ಟರಿಂಗ್ ನಡೆಸಬೇಕು.    ಮೊದಲ ಹಂತದ ಮಸ್ಟರಿಂಗ್ ಕೆಲಸ ಪೂರ್ಣಗೊಂಡ ಬಳಿಕ ದ್ವಿತೀಯ ಹಂತದಲ್ಲಿ ಇದಕ್ಕಾಗಿ ರೇಶನ್ ಅಂಗಡಿಗಳಲ್ಲಿ  ಶಿಬಿರಗಳನ್ನು ನಡೆಸುವ ತೀರ್ಮಾನವನ್ನೂ ಕೈಗೊಳ್ಳಲಾಗಿದೆ.

Leave a Reply

Your email address will not be published. Required fields are marked *

You cannot copy content of this page