ಬೆಂಗಳೂರಿನಲ್ಲಿ ಬೈಕ್ ಅಪಘಾತ: ಇಬ್ಬರು ಕೇರಳೀಯ ವಿದ್ಯಾರ್ಥಿಗಳು ಮೃತ್ಯು
ಬೆಂಗಳೂರು: ಬೆಂಗಳೂರಿನ ಕಮ್ಮನಹಳ್ಳಿ ಎಂಬಲ್ಲಿ ಸಂಭವಿಸಿದ ಬೈಕ್ ಅಪಘಾತದಲ್ಲಿ ಇಬ್ಬರು ಕೇರಳೀಯ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ.
ಕೊಲ್ಲಂ ನಿವಾಸಿಗಳಾದ ಆಲ್ಬಿಜಿ. ಜೇಕಬ್ (೨೧), ವಿಷ್ಣು ಕುಮಾರ್ ಎಸ್.(೨೫) ಎಂಬಿವರು ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ನಿನ್ನೆ ಮಧ್ಯಾಹ್ನ ವೇಳೆ ಅಪಘಾತ ಸಂಭವಿಸಿದೆ. ಬೈಕ್ ಡಿವೈಡರ್ಗೆ ಢಿಕ್ಕಿ ಹೊಡೆದು ಮಗುಚಿ ಬಿದ್ದು ಅಪಘಾತ ಸಂಭವಿಸಿದೆ.