ಬೆಂಗಳೂರಿನಲ್ಲಿ ಬೈಕ್ ಅಪಘಾತ ಕಾಸರಗೋಡಿನ ಯುವಕ ಮೃತ್ಯು

ಕಾಸರಗೋಡು: ಬೆಂಗಳೂರಿನ ಸಿಲ್ಕ್ ಬೋರ್ಡ್ ಸೇತುವೆಯಲ್ಲಿ ಉಂಟಾದ ಬೈಕ್ ಅಪಘಾತದಲ್ಲಿ ಕಾಸರಗೋಡು ನಿವಾಸಿಯೊಬ್ಬರು ಮೃತಪಟ್ಟ ಘಟನೆ ನಡೆದಿದೆ. ಕಾಸರಗೋಡು ತೆರುವತ್ತ್ ಶಂಸ್ಸ್ ವೀಟಿಲ್‌ನ ಮುಸಾದ್ ಎಂಬವರ ಪುತ್ರ ಮಜಾಸ್ (೩೪) ದಾರುಣವಾಗಿ ಸಾವನ್ನಪ್ಪಿದ ವ್ಯಕ್ತಿಯಾಗಿದ್ದಾರೆ. ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ದುಡಿಯುತ್ತಿರುವ ಮಜಾಸ್ ನಿನ್ನೆ ಮುಂಜಾನೆ  ಮಡಿವಾಳದಿಂದಬೊಮ್ಮನ ಹಳ್ಳಿಯಲ್ಲಿರುವ ತನ್ನ ವಾಸಸ್ಥಳಕ್ಕೆ ಬೈಕ್‌ನಲ್ಲಿ ಹೋಗುವ ದಾರಿ ಮಧ್ಯೆ ಬೈಕ್ ನಿಯಂತ್ರಣ ತಪ್ಪಿ ಮಗುಚಿ ಬಿದ್ದು ಅಪಘಾತ ಸಂಭವಿಸಿದೆ. ಮೃತದೇಹವನ್ನು ಊರಿಗೆ ತರುವ ತಯಾರಿ ನಡೆಸಲಾಗುತ್ತಿದೆ. ಮೃತರು ಪತ್ನಿ ಮುಮ್ತಾಸ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page