ಬೆಕ್ಕನ್ನು ರಕ್ಷಿಸಲು ಬಾವಿಗಿಳಿದು ಸಿಲುಕಿಕೊಂಡ ವಿದ್ಯಾರ್ಥಿ: ಅಗ್ನಿಶಾಮಕದಳದಿಂದ ರಕ್ಷಣೆ

ಕಾಸರಗೋಡು: ಬೆಕ್ಕನ್ನು ರಕ್ಷಿಸಲು ಬಾವಿಗಿಳಿದ  ವಿದ್ಯಾರ್ಥಿ ಮೇಲ ಕ್ಕೇರಲು ಸಾಧ್ಯವಾಗದೆ ಅಲ್ಲೇ ಸಿಲುಕಿಕೊಂಡಾಗ ಕಾಸರಗೋಡು  ಅಗ್ನಿಶಾಮಕದಳ ಆಗಮಿಸಿ ಆತನನ್ನು ರಕ್ಷಿಸಿದ ಘಟನೆ ನಡೆದಿದೆ.

ಆಲಂಪಾಡಿ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಎರಿಯಪ್ಪಾಡಿ ಮರಕೆ ಮೂಲೆಯ ಬಿ.ಕೆ. ಅಬ್ದುಲ್ಲ (15) ಹೀಗೆ ರಕ್ಷಿಸಲ್ಪಟ್ಟ   ಇವರ ಮನೆಯ ಕಟ್ಟೆಯಿರುವ 20 ಅಡಿ ಆಳದ  ಬಾವಿಗೆ ಮೂರು ದಿನಗಳ ಹಿಂದೆ ಬೆಕ್ಕು ಬಿದ್ದು ಅದು ಮೆಟ್ಟಿಲ ಮೇಲೆ ಕುಳಿತ ಸ್ಥಿತಿಯಲ್ಲಿ ಪತ್ತೆಯಾ ಗಿತ್ತು. ಅದನ್ನು ರಕ್ಷಿಸಲೆಂದು ಅಬ್ದುಲ್ಲ ನಿನ್ನೆ ಸಂಜೆ ಬಾವಿಗಿಳಿದಿದ್ದನು. ಬಳಿಕ ಬೆಕ್ಕನ್ನು ಬಕೆಟ್‌ನೊಳಗೆ ಹಾಕಿ  ಮೇಲಕ್ಕೆತ್ತಲಾಯಿತು.  ಆದರೆ ಅಬ್ದುಲ್ಲ ನಿಗೆ ನಂತರ ಬಾವಿಯಿಂದ ಮೇಲಕ್ಕೇರಲು ಸಾಧ್ಯವಾಗಲಿಲ್ಲ. ಆ ಬಗ್ಗೆ ನೀಡಲಾದ ಮಾಹಿತಿಯಂತೆ ಸೀನಿಯರ್ ಫಯರ್ ಆಂಡ್ ರೆಸ್ಕ್ಯೂ ಆಫೀಸರ್ ವಿ.ಎಸ್. ವೇಣುಗೋಪಾಲ್ ನೇತೃತ್ವದ ಅಗ್ನಿಶಾಮಕದಳ ಸ್ಥಳಕ್ಕಾ ಗಮಿಸಿ ಅಬ್ದುಲ್ಲನ್ನು ಬಾವಿಯಿಂದ ಮೇಲಕ್ಕೆತ್ತಿ ರಕ್ಷಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page