ಬೆದ್ರಡ್ಕದಲ್ಲಿ ಬಿಲ್ಲವ ಸೇವಾ ಸಂಘ ನೂತನ ಕಟ್ಟಡಕ್ಕೆ ಶಿಲಾನ್ಯಾಸ

ಬೆದ್ರಡ್ಕ: ಬಿಲ್ಲವ  ಸೇವಾ ಸಂಘ ಬೆದ್ರಡ್ಕ ಪ್ರಾದೇಶಿಕ ಸಮಿತಿ ಮತ್ತು ಶ್ರೀ ನಾರಾಯಣ ಗುರು ಮಹಿಳಾ ಸಂಘ ಬೆದ್ರಡ್ಕ, ಮೊಗ್ರಾಲ್ ಪುತ್ತೂರು ಘಟಕದ ಆಶ್ರಯದಲ್ಲಿ ನಿರ್ಮಿಸಲಿರುವ ನೂತನ  ಕಟ್ಟಡದ ಶಿಲಾನ್ಯಾಸ ನಡೆಸಲಾಯಿತು. ಶಿಲ್ಪಿ ಭೋಜರಾಜ ಆಚಾರ್ಯ ದೇಶಮಂಗಲ ನೇತೃತ್ವ ವಹಿಸಿದ್ದರು. ಪುಳ್ಕೂರು ಶ್ರೀ ಮಹಾದೇವ ಕ್ಷೇತ್ರದ ಅರ್ಚಕ ಪ್ರಭಾಕರ ಕಾರಂತ, ವಾಸುದೇವ ಹೇರಳ ಬೆದ್ರಡ್ಕ, ಸಿವಿಲ್ ಇಂಜಿನಿಯರ್ ಅವಿನಾಶ್ ಆಚಾರ್ಯ, ಜಿಲ್ಲಾ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಕಮಲಾಕ್ಷ ಸುವರ್ಣ, ತಾರಾನಾಥ ಗಂಗೆ, ದಯಾನಂದ ಅಡ್ಕತ್ತಬೈಲು, ಶಿವ ಕಾಸರಗೋಡು, ಚಂದ್ರಶೇಖರ ಚಿಪ್ಲುಕೋಟೆ, ಕರಂಡಕ್ಕಾಡು ಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘದ ಅಧ್ಯಕ್ಷ ರಘು ಮೀಪುಗುರಿ, ಮಧೂರು ಘಟಕದ ಅಧ್ಯಕ್ಷ ಉಮೇಶ ಪೂಜಾರಿ ಭಗವತಿನಗರ, ಕಾರ್ಯದರ್ಶಿ ರವೀಂದ್ರಕೂಡ್ಲು, ಬೆದ್ರಡ್ಕ ಬಿಲ್ಲವ ಸೇವಾ ಸಂಘದ ಗೌರವಾಧ್ಯಕ್ಷ ಬಂಟಪ್ಪ ಪೂಜಾರಿ ಮತ್ತು ಅಮ್ಮು ಅಮೀನ್ ನೀರಾಳ, ಸಂಘದ ಅಧ್ಯಕ್ಷ ಯೋಗೀಶ್ ಪೂಜಾರಿ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನೀರಾಳ, ಖಜಾಂಚಿ ವಿಕ್ರಮ್ ಅಮ್ಚಿಕೆರೆ, ಶ್ರೀ ನಾರಾಯಣಗುರು ಮಹಿಳಾ ಸಂಘದ ಸದಸ್ಯೆಯರು ಉಪಸ್ಥಿತರಿದ್ದರು.

RELATED NEWS

You cannot copy contents of this page