ಉಪ್ಪಳ: ಕೂಲಿ ಕಾರ್ಮಿಕ ನೇಣುಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೂಲತ: ಶಿರಿಯ ನಿವಾಸಿ ಕುಬಣೂರು ಡಾ.ಬಿ.ಆರ್ ಅಂಬೇಡ್ಕರ್ ಕ್ಲಬ್ ಬಳಿಯಲ್ಲಿ ವಾಸವಾಗಿರುವ ವಸಂತ (೪೪) ಮಂಗಳವಾರ ರಾತ್ರಿ ಊಟ ಮಾಡಿ ಮಲಗಿದ್ದÄ, ಬುಧವಾರ ಬೆಳಿಗ್ಗೆ ೮ಗಂಟೆ ವೇಳೆ ಮನೆಯವರು ಎದ್ದಾಗ ಹಿಂಭಾಗದಲ್ಲಿ ಕಿಟಿಕಿಗೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮಾಹಿತಿ ತಿಳಿದು ಕೂಡಲೇ ಸ್ಥಳಕ್ಕೆ ತಲುಪಿದ ಸ್ಥಳೀಯರು ಅವರನ್ನು ಮಂಗಲ್ಪಾಡಿ ತಾಲೂಕು ಆಸ್ಪತ್ರೆಗೆ ಸಾಗಿಸಿದ್ದಾರೆ. ಸಾವಿಗೆ ಕಾರಣವೇನೆಂದು ತಿಳಿದು ಬಂದಿಲ್ಲ. ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಬಳಿಕ ಪುಳಿಕುತ್ತಿ ಸ್ಮಶಾನದಲ್ಲಿ ಅಂತ್ಯಸAಸ್ಕಾರ ನಡೆಯಿತು. ದಿ| ಐತ್ತ -ದಿ| ಸುಬ್ಬಿ ದಂಪತಿ ಪುತ್ರರಾದ ಮೃತರು ಪತ್ನಿ ಸುಮತಿ, ಮಕ್ಕಳಾದ ಧನ್ಯ, ಧನುಷ್, ಸಹೋದರ, ಸಹೋದರಿಯರಾದ ಪ್ರಶಾಂತ್, ಪ್ರಭಾಕರ, ಶೋಭಾ, ಸುನೀತ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ನಿಧನಕ್ಕೆ ಕುಬಣೂರು ಡಾ.ಬಿ.ಆರ್ ಅಂಬೇಡ್ಕರ್ ಕಲಾ ಸಂಘ ಸಂತಾಪ ಸೂಚಿಸಿದೆ.






