ಭಾರತದಲ್ಲಿ ಕಮ್ಯುನಿಸ್ಟ್ ಪಕ್ಷಗಳು ನಿರಾಶ್ರಿತ ಅವಸ್ಥೆಯತ್ತ ಸಾಗುತ್ತಿದೆ- ಕೇಂದ್ರ ಸಚಿವ ರಾಜ್ನಾಥ್ ಸಿಂಗ್
ಕಾಸರಗೋಡು: ಭಾರತದಲ್ಲಿ ಕಮ್ಯೂನಿಸ್ಟ್ ಪಕ್ಷಗಳು ನಿರಾಶ್ರಿತ ಅವಸ್ಥೆಯತ್ತ ಸಾಗುತ್ತಿದೆ ಎಂದು ಕೇಂದ್ರ ರಕ್ಷಣಾ ಖಾತೆ ಸಚಿವ ರಾಜ್ನಾಥ್ ಸಿಂಗ್ ಹೇಳಿದ್ದಾರೆ. ಕಾಸರಗೋಡು ನಗರದ ತಾಳಿಪಡ್ಪು ಮೈದಾನದಲ್ಲಿ ಕಾಸರಗೋಡು ಲೋಕಸಭಾ ಕ್ಷೇತ್ರದ ಎನ್ಡಿಎ ಉಮೇದ್ವಾರೆ ಎಂ.ಎಲ್. ಅಶ್ವಿನಿಯವರ ಪರವಾಗಿ ನಿನ್ನೆ ನಡೆದ ಬೃಹತ್ ಜನಸ್ತೋಮ ನೆರೆದ ಚುನಾ ವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಸಚಿವರು ಮಾತನಾಡಿದರು.
ಕೇರಳದಲ್ಲಿ ಎಡರಂಗ ಮತ್ತು ಐಕ್ಯರಂಗವನ್ನು ಮೆಟ್ಟಿ ಹೊರದಬ್ಬಬೇಕು. ಕೇರಳದಲ್ಲಿ ಎಡರಂಗ ಮತ್ತು ಐಕ್ಯರಂಗ ಪರಸ್ಪರ ಹೊಡೆದಾಡಿಕೊಳ್ಳುತ್ತಿದ್ದರೆ, ಕೇರಳದ ಗಡಿ ದಾಟಿದಲ್ಲಿ ಅವರು ಉತ್ತಮ ಸ್ನೇಹಿತರಾಗುತ್ತಿದ್ದಾರೆ ಎಂದೂ ಸಚಿವರು ಟೀಕಿಸಿದರು.
ಕಾಶ್ಮೀರದಿಂದ ಕನ್ಯಾಕುಮಾರಿ ತನಕ ರಾಮನವಮಿಯನ್ನು ಅತ್ಯಂತ ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಶ್ರೀರಾಮ ಕೇವಲ ದೇವರು ಮಾತ್ರವಲ್ಲ ನಮ್ಮ ಭಾರತದ ಸಾಂಸ್ಕೃತಿಕ ನಾಯಕನೂ ಆಗಿದ್ದಾನೆ.
ಆದರೆ, ಇದನ್ನು ಕಮ್ಯೂನಿಸ್ಟ್ ಆಗಲೀ ಕಾಂಗ್ರೆಸ್ ಪಕ್ಷವಾಗಲೀ ಮನದಟ್ಟು ಮಾಡಿಕೊಳ್ಳುತ್ತಿಲ್ಲ. ಅಯೋಧ್ಯೆಯಲ್ಲಿ ಶ್ರೀರಾಮ ಕ್ಷೇತ್ರದ ವಿರುದ್ಧ ನಿಂತವರು ಖಂಡಿತವಾಗಿ ಯೂ ಭಾರತ ದಿಂದಲೇ ದೂರ ತಳ್ಳಲ್ಪಡಲಿರು ವರು ಎಂದು ಸಚಿವರು ಹೇಳಿದರು.
ಮೋದಿ ಸರಕಾರ ಭಾರತದ ಬಡವರಿಗಾಗಿ ನಾಲ್ಕು ಕೋಟಿ ಮನೆಗಳನ್ನು ನಿರ್ಮಿಸಿಕೊಟ್ಟಿದೆ. ಇದರ ಹೊರತಾಗಿ ಇನ್ನೂ ಮೂರು ಕೋಟಿ ಮನೆ ನಿರ್ಮಿಸುವ ಯೋಜನೆ ಮೋದಿ ಸರಕಾರ ಹಾಕಿಕೊಂಡಿದೆ. ಕಿಸಾನ್ ಸಮ್ಮಾನ್ ನಿಧಿಯಿಂದ ಕೋಟಿಗಟ್ಟಲೆ ರೈತರಿಗೆ ಸಹಾಯ ಲಭಿಸಿದೆ. ಇದು ಇನ್ನೂ ಮುಂದುವರಿಯಲಿದೆ.
೭೦ ವರ್ಷ ದಾಟಿರುವ ಎಲ್ಲರಿಗೂ ಆಯುಷ್ಮಾನ್ ಭಾರತ್ ಯೋಜನೆ ಪ್ರಕಾರ ಉಚಿತ ಚಿಕಿತ್ಸಾ ವಿಮೆ ಖಾತರಿಪಡಿಸಲಾಗುವುದು. ಮಾತ್ರವಲ್ಲ ದೇಶದ ಎಲ್ಲಾ ಸ್ತರಗಳ ಜನರು ಉತ್ತಮ ರೀತಿಯ ಜೀವನ ಸಾಗಿಸುವಂತೆ ಮಾಡಲು ಮೋದಿಯವರು ಗ್ಯಾರಂಟಿ ನೀಡಿದ್ದಾರೆ. ಕೇರಳದಲ್ಲಿ ಈ ಹಿಂದೆ ಕೇವಲ ೨ ಶೇಕಡಾದಷ್ಟು ಮತಗಳನ್ನು ಪಡೆದಿದ್ದ ಬಿಜೆಪಿಯ ಮತಗಳಿಕೆ ಯಲ್ಲಿ ಈಗ ಭಾರೀ ಏರಿಕೆ ಉಂಟಾಗಿದೆ. ಇದು ಕೇರಳದಲ್ಲಿ ಈ ಬಾರಿ ಎನ್ಡಿಎ ಖಂಡಿತವಾಗಿ ಖಾತೆ ತೆರೆಯಲು ಸಹಾಯಕವಾಗಲಿದೆ ಎಂದೂ ಅವರು ಹೇಳಿದ್ದಾರೆ.
ಬಿಜೆಪಿ ಹೇಳುವುದನ್ನೇ ಮಾಡು ತ್ತದೆ. ೧೦ ಕೋಟಿ ಮಹಿಳಾ ಸಬಲೀಕರ ಣಕ್ಕೂ ಹಲವು ಯೋಜನೆಗಳನ್ನು ಜ್ಯಾರಿಗೊಳಿಸಿದೆ. ೨೦೪೭ರ ವೇಳೆಗೆ ಭಾರತ ಇಡೀ ವಿಶ್ವದಲ್ಲೇ ಅತೀ ದೊಡ್ಡ ತೃತೀಯ ಆರ್ಥಿಕ ಶಕ್ತಿಯಾಗಿ ಹೊರ ಹೊಮ್ಮಲಿದೆ. ಎನ್ಡಿಎಯ ಚುನಾ ವಣಾ ಪ್ರಣಾಳಿಕೆಯಲ್ಲೂ ಇದನ್ನು ಸ್ಪಷ್ಟಪಡಿಸಲಾಗಿದೆ ಎಂದು ಸಚಿವರು ಹೇಳಿದರು.