ಭಾವಿ ವರ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಬದಿಯಡ್ಕ: ಮುಂದಿನ ಡಿಸೆಂ ಬರ್ ತಿಂಗಳಲ್ಲಿ ಮದುವೆಯಾಗ ಬೇಕಿದ್ದ ಯುವಕ ಮನೆಯೊಳಗೆ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

ಗೋಳಿಯಡ್ಕದ ಧರ್ಮದೈವ ನಿಲಯದ ಐತ್ತಪ್ಪ ಎಂಬವರ ಪುತ್ರ ಅನಿಲ್ ಕುಮಾರ್ (26) ಮೃತಪಟ್ಟ ಯುವಕ.  ಮೊನ್ನೆ ರಾತ್ರಿ ಊಟ ಮಾಡಿ ಇವರು ನಿದ್ರಿಸಿದ್ದರು. ನಿನ್ನೆ ಬೆಳಿಗ್ಗೆ 10 ಗಂಟೆಯಾದರೂ ಎದ್ದಿರದ ಹಿನ್ನೆಲೆಯಲ್ಲಿ ಮನೆಯವರು ಬಾಗಿಲು ಬಡಿದರೂ ಯಾವುದೇ ಪ್ರತಿಕ್ರಿಯೆ  ಬಂದಿಲ್ಲ. ಮೊಬೈಲ್ ಫೋನ್  ಕೂಡಾ ಸ್ವಿಚ್ ಆಫ್ ಆದ ಸ್ಥಿತಿಯ ಲ್ಲಿತ್ತು. ಇದರಿಂದ ನೆರೆಮನೆಯವರು ತಲುಪಿ ಕಿಟಿಕಿ ತೆರೆದು ನೋಡಿದಾಗ ಅನಿಲ್ ಕುಮಾರ್ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾ ಗಿದ್ದಾರೆ.   ಬದಿಯಡ್ಕ ಪೊಲೀಸರು ತಲುಪಿ ಮೃತದೇಹದ ಪಂಚನಾಮೆ ನಡೆಸಿದ ನಂತರ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಸಂಜೆ ವೇಳೆ ಮೃತದೇಹವನ್ನು ಸ್ವ-ಗೃಹಕ್ಕೆ ತಲುಪಿಸಿ ಮನೆ ಹಿತ್ತಿಲಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು.

ಅನಿಲ್ ಕುಮಾರ್‌ರ ಮದುವೆ ಮುಂದಿನ ಡಿಸೆಂಬರ್ ತಿಂಗಳಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಇವರು ಚಾಲಕ ವೃತ್ತಿ ನಡೆಸುತ್ತಿದ್ದರು.  ಆದರೆ ನೇಣು ಬಿಗಿದು ಸಾವಿಗೀಡಾಗಲು  ಕಾರಣವೇ ನೆಂದು ತಿಳಿದುಬಂದಿಲ್ಲ. ಅನಿಲ್ ಕುಮಾರ್‌ರ ತಾಯಿ ಗುರುವಮ್ಮ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರು ಸಹೋದರ-ಸಹೋದ ರಿಯರಾದ ನವೀನ್ ಕುಮಾರ್, ಅನುಪ್ರಿಯ, ಅನುಷ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page