ಮಂಗಳಾ ಕ್ಯಾಂಪಸ್‌ನಲ್ಲಿ ಉದ್ಯೋಗಾಧಾರಿತ ವೈದ್ಯಕೀಯ ಕೋರ್ಸ್‌ಗಳ ಕಾರ್ಯಾಗಾರ, ಸಲಹಾ ಶಿಬಿರ

ಮಂಗ¼್ಣÆರು: ಮಂಗಳಾ ಸಮೂಹ ವಿದ್ಯಾ ಸಂಸ್ಥೆಯ ಕ್ಯಾಂಪಸ್‌ನಲ್ಲಿ ಈ ತಿಂಗಳ 20, 21ರಂದು ಉದ್ಯೋಗಾಧಾರಿತ ಕೋರ್ಸುಗಳ ಸಲಹೆ ಮತ್ತು ಅಭ್ಯರ್ಥಿಗಳ ದಾಖಲಾತಿ ಶಿಬಿರ ನಡೆಯಲಿದೆ. ಶಿಬಿರದಲ್ಲಿ ವೈದ್ಯಕೀಯ ವಲಯದಲ್ಲಿ ಲಭ್ಯವಿರುವ ಉದ್ಯೋಗಾಧಾರಿತ ವಿವಿಧ ಕೋರ್ಸುಗಳ ಬಗ್ಗೆ ಮತ್ತು ಕೋರ್ಸು ಗಳ ದಾಖಲಾತಿಗೆ ಅನುಸರಿಸಬೇ ಕಾದ ಕ್ರಮಗಳ ಬಗ್ಗೆ ಮಾರ್ಗದರ್ಶನ ಹಮ್ಮಿಕೊಳ್ಳಲಾಗಿದೆ. ಉದ್ಯೋಗ ವಲಯಗಳಲ್ಲಿ ಅತ್ಯಂತ ಬೇಡಿಕೆ ಇರುವ ನರ್ಸಿಂಗ್ ಕೋರ್ಸುಗಳು, ಲ್ಯಾಬ್ ಟೆಕ್ನಿಶಿಯನ್, ಅನಸ್ಥೆಶಿಯಾ ಟೆಕ್ನಿಶಿಯನ್, ಡಯಾಲಿಸಿಸ್ ಟೆಕ್ನಿಶಿಯನ್, ಆಪ್ಟೊ ಮೆಟ್ರಿ, ಫಿಸಿಯೋಥೆರಪಿ ಮುಂತಾದ 23ಕ್ಕಿಂತಲೂ ಹೆಚ್ಚಿನ ಡಿಪ್ಲೋಮಾ, ಪದವಿ ಅಲ್ಲದೆ ಸ್ನಾತಕೋತ್ತರ ಶಿಕ್ಷಣದ ಅವಕಾಶಗಳ ಬಗ್ಗೆ ಸಮಗ್ರ ಮಾಹಿತಿ ಗಳನ್ನು ತಿಳಿಸಿಕೊಡಲಾಗುವುದು ಎಂದು ಸಂಬAದsಪಟ್ಟವರು ತಿಳಿಸಿದ್ದಾರೆ. ವಿವಿಧ ಕೋರ್ಸುಗಳ ವಿವಿಧ ಭಾಗಗಳ ವಿಷಯ ತಜ್ಞರನ್ನು ಭೇಟಿಯಾಗಿ ಸಲಹೆಗಳನ್ನು ಪಡೆಯುವ ಅವಕಾಶಗಳನ್ನು ಇಲ್ಲಿ ಒದಗಿಸಲಾಗಿದೆ.
ಶಿಬಿರದಲ್ಲಿ ಶೈಕ್ಷಣಿಕ ಸಾಲದ ಬಗ್ಗೆ, ವಿದ್ಯಾರ್ಥಿವೇತನಗಳ ಬಗ್ಗೆ, ಸರಕಾರದ ಸವಲತ್ತುಗಳ ಬಗ್ಗೆ ಕೂಡಾ ಮಾಹಿತಿಗಳನ್ನು ಪಡೆಯಬ ಹುದಾಗಿದ್ದು ಅದೇ ದಿನ ದಾಖಲಾತಿ ಖಚಿತಪಡಿಸಿದರೆ ಶುಲ್ಕ ರಿಯಾಯಿತಿ ಇದೆÀ ಎಂದು ಸಂಸ್ಥೆ ಪದಾದಿsಕಾರಿ ಗಳು ತಿಳಿಸಿದ್ದಾರೆ. ನಾಕ್ (ಓಂAಅ) ಸಂಸ್ಥೆಯ ಮಾನ್ಯತೆ ಯನ್ನು ಕರ್ನಾಟಕದಲ್ಲಿ ಮೊದಲನೆಯದಾಗಿ ಪಡೆದ ಕಾಲೇಜು ರಾಷ್ಟçದ 5ನೇಯ ಅಲ್ಲೆöÊಡ್ ಹೆಲ್ತ್ ಸಯನ್ಸಸ್ ಕಾಲೇಜೆಂಬ ಹೆಗ್ಗಳಿಕೆಯನ್ನು ಪಡೆದಿರುವ ಈ ಕಾಲೇಜಿನಿಂದ ಕಲಿತು ಹೊರಬಂದ ವಿದ್ಯಾರ್ಥಿಗಳಿಗೆ ಉದ್ಯೋಗ ಗಳಿಸಲು ಈ ಮಾನ್ಯತೆಯು ಹೆಚ್ಚಿನ ಸಹಕಾರಿ ಯಾಗುವುದು ಎಂದು ಸಂಸ್ಥೆಯ ಸ್ಥಾಪಕಾಧ್ಯಕ್ಷ ಡಾ. ಗಣಪತಿ ಪಿ, ಡಾ. ಅನಿತಾ ಜಿ. ಭಟ್ ಜಂಟಿ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.

Leave a Reply

Your email address will not be published. Required fields are marked *

You cannot copy content of this page