ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವ ಸಮಾಪ್ತಿ: ಹೈಯರ್ ಸೆಕೆಂಡರಿಯಲ್ಲಿ ಧರ್ಮತ್ತಡ್ಕ, ಹೈಸ್ಕೂಲ್ನಲ್ಲಿ ಎಸ್ಎಟಿ ಮಂಜೇಶ್ವರ ಪ್ರಥಮ
ಉಪ್ಪಳ: ಕಳೆದ ನಾಲ್ಕು ದಿನಗಳಿಂದ ಮಂಗಲ್ಪಾಡಿ ಸರಕಾರಿ ಶಾಲೆಯಲ್ಲಿ ನಡೆಯುತ್ತಿರುವ ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವ ನಿನ್ನೆ ಸಂಜೆ ಸಮಾಪ್ತಿಗೊಂಡಿತು. ಮಂಗಲ್ಪಾಡಿ ಪಂಚಾಯತ್ ಅಧ್ಯಕ್ಷೆ ರುಬಿನ ನೌಫಲ್ ಅಧ್ಯಕ್ಷತೆ ವಹಿಸಿದರು. ಬ್ಲೋಕ್ ಪಂಚಾಯತ್ ಅಧ್ಯಕ್ಷೆ ಶಮೀನ ಟೀಚರ್ ಉದ್ಘಾಟಿಸಿದರು. ಜಿಲ್ಲಾ ಪಂಚಾಯತ್ ಸದಸ್ಯ ಗೋಲ್ಡನ್ ಅಬ್ದುಲ್ ರಹಿಮಾನ್, ಜಿಲ್ಲಾ ವಿದ್ಯಾಧಿಕಾರಿ ದಿನೇಶ್, ಬ್ಲೋಕ್ ಪಂಚಾಯತ್ ಉಪಾಧ್ಯಾಕ್ಷ ಮೊಹಮ್ಮದ್ ಹನೀಫ್, ಮಂಗಲ್ಪಾಡಿ ಪಂಚಾಯತ್ ಜನಪ್ರತಿನಿಧಿಗಳಾದ ಕೈರುನ್ನೀಸ ಉಮ್ಮರ್, ವಿಜಯ ಕುಮಾರ್ ರೈ ಮಳ್ಳಂಗೈ, ಇಬ್ರಾಹಿಂ ಪೆರಿಂಗಡಿ, ಟಿ.ಎ ಶರೀಫ್, ಕಿಶೋರ್ ಕುಮಾರ್ ಬಂದ್ಯೋಡು, ಮಜೀದ್ ಪಚ್ಚಂಬಳ, ರೇವತಿ, ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ರಾಜಗೋಪಾಲ, ಮಂಜೇಶ್ವರ ಬಿಪಿಸಿ ಜೋಯಿ, ಮೊಹಮ್ಮದ್ ಉಪ್ಪಳ ಗೇಟ್, ಐಲ ಶ್ರೀ ಶಾರದಾ ಬೋವಿ ಶಾಲಾ ಮೆನೇಜರ್ ಆನಂದ, ಮುಖ್ಯೋಪಧ್ಯಾಯಿನಿ ಜಲಜಾಕ್ಷಿ, ಮಂಗಲ್ಪಾಡಿ ಸರಕಾರಿ ಶಾಲೆಯ ಎಂಪಿಟಿಎ ಅಧ್ಯಕ್ಷೆ ನಸೀಮ, ಪಿ.ಟಿಎ ಅಧ್ಯಕ್ಷ ಹಮೀದ್ ಕೋಸ್ಮೋಸ್, ಪ್ರಾನ್ಸ್ಪಾಲ್ ಶ್ರೀಕುಮಾರ್, ಮಂಜೇಶ್ವರ ಉಪಜಿಲ್ಲಾ ಮುಖ್ಯೋಪಧ್ಯಾಯರ ಫೋರಂ ಕಾರ್ಯದರ್ಶಿ ಶ್ಯಾಮ್ ಭಟ್ ಶುಭಾಂಶನೆಗೈದರು. ಎಚ್.ಎಸ್.ಎಸ್ ಜನರಲ್ ವಿಭಾಗದಲ್ಲಿ 242 ಅಂಕ ಪಡೆದು ಪ್ರಥಮ ಸ್ಥಾನವನ್ನು ಎಸ್.ಡಿ.ಪಿ.ಎಚ್.ಎಸ್ ಧರ್ಮತ್ತಡ್ಕ ಪಡೆದಿದೆ. ದ್ವಿತೀಯ 232 ಅಂಕವನ್ನು ಎಸ್.ಎ.ಟಿ.ಎಚ್.ಎಸ್ ಮಂಜೇಶ್ವರ ಪಡೆದುಕೊಂಡಿದೆ. ಎಚ್.ಎಸ್.ಜನರಲ್ ಪ್ರಥಮ 250 ಅಂಕವನ್ನು ಎಸ್.ಎ.ಟಿ.ಎಚ್.ಎಸ್ ಮಂಜೇಶ್ವರ, ದ್ವಿತೀಯ 220 ಅಂಕವನ್ನು ಎಸ್.ಡಿ.ಪಿ.ಎಚ್.ಎಸ್ ಧರ್ಮತ್ತಡ್ಕ ಪಡೆದುಕೊಂಡಿದೆ.