ಮಂಜೇಶ್ವರ ಶಾಲೆಗಳಲ್ಲಿ ಹುಚ್ಚುನಾಯಿ ವಿಷಬಾಧೆ ವಿರುದ್ಧ ಸ್ಪೆಷಲ್ ಅಸೆಂಬ್ಲಿ

ಮಂಜೇಶ್ವರ: ಹುಚ್ಚುನಾಯಿ ವಿಷಬಾಧೆ ಪ್ರತಿರೋಧ ಚಟುವಟಿಕೆಗಳಂ ಗವಾಗಿ ಮಂಜೇಶ್ವರ ಬ್ಲೋಕ್ ಫ್ಯಾಮಿಲಿ ಹೆಲ್ತ್ ಸೆಂಟರ್‌ನ ಆಶ್ರಯದಲ್ಲಿ ಮಂಜೇಶ್ವರ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಶಾಲೆಗಳಲ್ಲಿ ಹುಚ್ಚುನಾಯಿ ವಿಷಬಾಧೆ ತಿಳುವಳಿಕೆ ತರಗತಿ, ಸ್ಪೆಷಲ್ ಅಸೆಂಬ್ಲಿ ನಡೆಸಲಾಯಿತು. ವಿದ್ಯಾರ್ಥಿ ಗಳು, ಅಧ್ಯಾಪಕರು, ಹೆತ್ತವರು, ಆರೋಗ್ಯ ಕಾರ್ಯಕರ್ತರು ಪ್ರತಿಜ್ಞೆ ಸ್ವೀಕರಿಸಿದರು. ವೈದ್ಯಾಧಿಕಾರಿ ಡಾ. ಪ್ರಭಾಕರ್, ಹೆಲ್ತ್ ಇನ್ಸ್‌ಪೆಕ್ಟರ್ ಮನೋಜ್, ಲೇಡಿ ಹೆಲ್ತ್ ಇನ್ಸ್‌ಪೆಕ್ಟರ್ ವಿನೋದಿನಿ, ಜ್ಯೂನಿ ಯರ್ ಹೆಲ್ತ್ ಇನ್ಸ್‌ಪೆಕ್ಟರ್‌ಗಳಾದ ಅಖಿಲ್, ಪ್ರಮಿನ್, ವಿಪಿನ್, ಶಾಫಿ, ನರ್ಸ್‌ಗಳಾದ ಅನೀಸ, ಸಫ್ನ, ಸೌಮ್ಯ, ಸಿತಾರಾ, ಜಿನು, ವಿಜಿನ ಭಾಗವಹಿಸಿದರು.

RELATED NEWS

You cannot copy contents of this page