ಮಜೀರ್‌ಪಳ್ಳದಲ್ಲಿ ಭಾರತ್ ಲಾಟರಿ ಏಜೆನ್ಸಿ ಮಾರಾಟ ಮಾಡಿದ ಟಿಕೆಟ್‌ಗೆ ೧೨ ಕೋಟಿ ರೂ.

ಉಪ್ಪಳ: ರಾಜ್ಯ ಪೂಜಾ ಬಂಪರ್ ಲಾಟರಿಯ ಪ್ರಥಮ ಬಹುಮಾನ ೧೨ ಕೋಟಿ ರೂ. ಮಜೀರ್‌ಪಳ್ಳದ ಭಾರತ್ ಲಾಟರಿ ಏಜೆನ್ಸಿಯಿಂದ ಮಾರಾಟ ಮಾಡಿದ ಟಿಕೆಟ್ ನಂಬ್ರ ಜೆಸಿ ೨೫೩೧೯೯ಕ್ಕೆ ಲಭಿಸಿದೆ. ಜತೆಗೆ ದ್ವಿತೀಯ ಬಹುಮಾನವಾದ ಒಂದು ಕೋಟಿ ರೂ. ಲಭಿಸಿದ ಟಿಕೆಟ್‌ನ್ನು ಕೂಡಾ ಇವರೇ ಮಾರಾಟ ಮಾಡಿದ್ದಾರೆ. ಮೂಲತಃ ಕಣ್ಣೂರು ಮಣಕಡವ್ ನಿವಾಸಿಗಳಾದ ಜೋಜೋ ಜೋಸಫ್- ಮೇರಿ ಕುಟ್ಟಿ ದಂಪತಿ ಕಳೆದ ೧೩ ವರ್ಷದಿಂದ ಮೊರತ್ತಣೆ ಬಟ್ಟಿಪದವುನಲ್ಲಿ ವಾಸಿಸುತ್ತಿದ್ದು, ೫ ವರ್ಷದಿಂದ ಲಾಟರಿ ಮಾರಾಟಕ್ಕೆ ತೊಡಗಿದ್ದಾರೆ. ಇವರು ವಾಹನದಲ್ಲಿ ಕಣ್ಣೂರು, ಕಾಸರಗೋಡು, ಎರ್ನಾಕುಳಂ ಜಿಲ್ಲೆಗಳಲ್ಲಿ ಸಂಚರಿಸಿ ಟಿಕೆಟ್ ಮಾರಾಟ ಮಾಡುತ್ತಿದ್ದಾರೆ. ಆದ್ದರಿಂದ ಪ್ರಥಮ ಬಹುಮಾನ ಲಭಿಸಿದ ಟಿಕೆಟ್ ಮಾರಾಟ ಮಾಡಿದ್ದು ಎಲ್ಲಿ ಎಂಬ ಬಗ್ಗೆ ಇವರಿಗೆ ಈಗ ತಿಳಿದಿಲ್ಲ. ಮಜೀರ್ಪಳ್ಳ ದಿಂದ ಕರ್ನಾಟಕ ನಿವಾಸಿಗಳೂ ಟಿಕೆಟ್ ಖರೀದಿಸುತ್ತಿದ್ದಾರೆ. ಟಿಕೆಟ್ ಮಾರಾಟ ಮಾಡಿ ಪ್ರಥಮ ಬಹುಮಾನ ಲಭಿಸಿದ ಲೆಕ್ಕದಲ್ಲಿ ವರಿಗೆ ಕಮಿಶನ್ ಆಗಿ ೧.೬ ಕೋಟಿ ರೂ. ಲಭಿಸುವುದೆನ್ನಲಾಗಿದೆ.

RELATED NEWS

You cannot copy contents of this page