ಮತ ಎಣಿಕೆಗೆ ಕೇಂದ್ರೀಯ ವಿ.ವಿಯಲ್ಲಿ ಸಕಲ ಸಿದ್ಧತೆ
ಕಾಸರಗೋಡು: ಕಾಸರಗೋಡು ಲೋಕಸಭಾ ಮಂಡಲದ ಮತ ಎಣಿಕೆ ಸಿದ್ಧತೆಗಳು ಪೂರ್ತಿಗೊಂಡಿರುವುದಾಗಿ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಕೆ. ಇಂಬಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ಬಿಜೋಯ್ ಸುದ್ಧಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಕೇರಳ, ಕೇಂದ್ರೀಯ ವಿವಿಯ ಗಂಗೋತ್ರಿ, ಕಾವೇರಿ, ಸಬರ್ಮತಿ ಎಂಬೀ ಬ್ಲೋಕ್ಗಳಲ್ಲಿ ಕಾಸರಗೋಡು ಲೋಕಸಭಾ ಮಂಡಲದ ಏಳು ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ನಡೆಯಲಿದೆ.
ಗಂಗೋತ್ರಿ ಬ್ಲೋಕ್ನಲ್ಲಿ ಮಂಜೇಶ್ವರ, ಕಾಸರಗೋಡು, ಉದುಮ ಮಂಡಲಗಳ ಮತವನ್ನು, ಕಾವೇರಿ ಬ್ಲೋಕ್ನಲ್ಲಿ ಕಾಞಂಗಾಡ್, ತೃಕ್ಕರಿಪುರ, ಪಯ್ಯನ್ನೂರು ಮಂಡಲಗಳ ಮತ ಎಣಿಕೆ ನಡೆಯಲಿದೆ. ಸಬರ್ಮತಿ ಕೇಂದ್ರದಲ್ಲಿ ಅಂಚೆ ಮತ ಎಣಿಕೆ ನಡೆಯಲಿದೆ.
ನಾಳೆ ಮುಂಜಾನೆ ೪ ಗಂಟೆಗೆ ಅಂಚೆ ಬ್ಲೋಕ್ನ ಭದ್ರತಾ ಕೊಠಡಿ ತೆರೆಯಲಾಗುವುದು. ೫ ಗಂಟೆಗೆ ನರ್ಮದಾ ಬ್ಲೋಕ್ನಲ್ಲಿ ಚುನಾವಣೆ ನಿರೀಕ್ಷಣಾ ನೇತೃತ್ವದಲ್ಲಿ ಸಬರ್ಮತಿ ಬ್ಲೋಕ್ನಲ್ಲಿ ನೌಕರರ ಮೂರನೇ ಹಂತದ ರಾಂಡಮೈಸೇಶನ್ ನಡೆಯಲಿದೆ. ೬ ಗಂಟೆಗೆ ಮಂಜೇಶ್ವರ ಎಲ್ಇಸಿ ಭದ್ರತಾ ಕೊಠಡಿ ತೆರೆಯಲಾಗುವುದು. ಎಣಿಕೆ ಆರಂಭಗೊಳ್ಳಲಿದೆ.