ಮದವೇರಿದ ಆನೆಯಿಂದ ಮಾವುತ ಮೃತ್ಯು
ಪಾಲಕ್ಕಾಡ್: ಕುಟ್ಟನಾಡಿನಲ್ಲಿ ಆಚರಣೆ ವೇಳೆ ಮದವೇರಿದ ಆನೆ ಮಾವುತನನ್ನು ಕೊಂದಿದೆ. ಕೋಟಯಂ ನಿವಾಸಿ ಕುಂಞಿಮೋನ್ (50) ಮೃತಪಟ್ಟ ಮಾವುತ. ಕುಟ್ಟನಾಡಿನಲ್ಲಿ ಜರಗಿದ ಕಾರ್ಯಕ್ರಮವೊಂದಕ್ಕೆ ತರಲಾಗಿದ್ದ ವಳ್ಳಕುಳಂ ನಾರಾಯಣನ್ ಕುಟ್ಟಿ ಎಂಬ ಆನೆಗೆ ಮದವೇರಿದ್ದು, ನಿನ್ನೆ ರಾತ್ರಿ ಮಾವುತನನ್ನು ಕೊಂದಿದೆ. ಇನ್ನೋರ್ವನಿಗೂ ಗಾಯವುಂಟಾಗಿದೆ ಎಂದು ಮಾಹಿತಿ ಲಭಿಸಿದೆ. ಜೊತೆಗೆ ಸಮೀಪ ದಲ್ಲಿದ್ದ ವಾಹನಗಳನ್ನು ಕೂಡಾ ಆನೆ ನಾಶಪಡಿಸಿದೆ. 28 ಪ್ರದೇಶಗಳಿಂದಾಗಿ 47 ಆನೆಗಳನ್ನು ಇಲ್ಲಿಗೆ ತರಲಾಗಿತ್ತು. 10 ವರ್ಷಕ್ಕಿಂತಲೂ ಹೆಚ್ಚು ಕಾಲ ಇಲ್ಲಿ ಆನೆಗಳ ಮೆರವಣಿಗೆ ನಡೆಸಲಾಗುತ್ತಿದ್ದು, ಆನೆಗೆ ಮದವೇರಲು ಕಾರಣವೇನೆಂದು ಸ್ಪಷ್ಟಗೊಂಡಿಲ್ಲ.