ಮನೆ ಕೇಂದ್ರೀಕರಿಸಿ ಗಾಂಜಾ ಮಾರಾಟ: ಓರ್ವ ಸೆರೆ

ಉಪ್ಪಳ: ಮನೆಯನ್ನು ಕೇಂದ್ರೀಕರಿಸಿ ಗಾಂಜಾ ಮಾರಾಟ ಮಾಡುತ್ತಿದ್ದ ಓರ್ವನನ್ನು ಮಂಜೇಶ್ವರ ಪೊಲೀಸರು ಸೆರೆ ಹಿಡಿದಿದ್ದಾರೆ. ಅಟ್ಟೆಗೋಳಿ ನಿವಾಸಿ ಜನಾರ್ದನ (24) ಸೆರೆಯಾದ ವ್ಯಕ್ತಿ. ಈತನ ಮನೆಯಿಂದ 38 ಗ್ರಾಂ ಗಾಂಜಾ ವನ್ನು ಪತ್ತೆಹಚ್ಚಲಾಗಿದೆ. ನಿನ್ನೆ ರಹಸ್ಯ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಠಾಣೆಯ ಎಸ್.ಐ. ನಿಖಿಲ್‌ರ ನೇತೃತ್ವದಲ್ಲಿ ದಾಳಿ ನಡೆಸಿದಾಗ ಮನೆಯ ಕೊಠಡಿಯೊಳಗೆ ಗಾಂಜಾ ಪತ್ತೆಯಾಗಿದೆ. ಈತನ ಪುತ್ರ ಕಿರಣ್ ಈ ಹಿಂದೆಯೂ ಗಾಂಜಾ ಪ್ರಕರ ಣದಲ್ಲಿ ಆರೋಪಿಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಮನೆಯಿಂ ದಲೇ ಗಾಂಜಾ ವಿತರಿಸುವುದು ಇವರ ಕಸುಬಾಗಿದೆಯೆಂದು ಪೊಲೀಸರು ತಿಳಿಸಿದ್ದು, ಆರೋಪಿಯನ್ನು ಜಾಮೀನಿನಲ್ಲಿ ಬಿಡುಗಡೆಗೊಳಿಸಲಾಯಿತು. ಪುತ್ರ ಕಿರಣ್‌ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

You cannot copy contents of this page