ಮನೆ ವರಾಂಡದಲ್ಲಿ ವೃದ್ಧ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಕುಂಬಳೆ: ವೃದ್ಧನೋರ್ವ ರಬ್ಬರ್ ತೋಟದಲ್ಲಿರುವ ಜನವಾಸವಿಲ್ಲದ ಮನೆಯ ವರಾಂಡದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ತಳಿಪರಂಬ ನಿವಾಸಿ ಅಪ್ಪಚ್ಚನ್ (೭೨) ಎಂಬವರು ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಕುಡಾಲು ಮೇರ್ಕಳ ಮಂಡೆಕಾಪಿನ ತಂಗಚ್ಚನ್ ಎಂಬವರ ಮನೆಯ ವರಾಂಡದಲ್ಲಿ ಅಪ್ಪಚ್ಚನ್‌ರ ಮೃತದೇಹ ನಿನ್ನೆ ಬೆಳಿಗ್ಗೆ ಕಂಡುಬಂದಿತ್ತು. ವಿಷಯ ತಿಳಿದು ತಲುಪಿದ ಕುಂಬಳೆ ಪೊಲೀಸರು ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಊರಿಗೆ ಕೊಂಡೊಯ್ಯಲಾಗಿದೆ. ಅಪ್ಪಚ್ಚನ್ ೩೦ ವಷಗಳಿಂದ ಮಂಡೆಕಾಪಿನ ಸದನ್ ಎಂಬವರ ತೋಟದಲ್ಲಿ ಕೃಷಿ ಕೆಲಸ ನಡೆಸುತ್ತಿದ್ದರೆನ್ನಲಾಗಿದೆ.

You cannot copy contents of this page