ಮನೆಗೆ ಬರಬೇಡವೆಂದ ದ್ವೇಷ: ಪೆಟ್ರೋಲ್ ಎರಚಿ ಯುವತಿಯ ಕೊಲೆಗೈಯ್ಯಲೆತ್ನ; ಆರೋಪಿ ಸೆರೆ
ಕೊಚ್ಚಿ: ಆಲುವಾದಲ್ಲಿ ಯುವತಿ ಯನ್ನು ಬೆಂಕಿಹಚ್ಚಿ ಕೊಲೆಗೈಯ್ಯ ಲೆತ್ನಿಸಿದ ಘಟನೆಯಲ್ಲಿ ಆರೋಪಿ ಸೆರೆಯಾಗಿದ್ದಾನೆ. ಮೂಪತ್ತಡ ನಿವಾಸಿ ಅಲಿಯನ್ನು ಆಲುವಾ ಪೊಲೀಸರು ಸೆರೆ ಹಿಡಿದಿದ್ದಾರೆ. ಚೂಂಡಿ ನಿವಾಸಿಯಾದ ಯುವತಿ ಯನ್ನು ಪೆಟ್ರೋಲ್ ಎರಚಿ ಬೆಂಕಿ ಹಚ್ಚಿ ಕೊಲೆಗೈಯ್ಯಲು ಈತ ಯತ್ನಿಸಿದ್ದನು. ತನ್ನನ್ನು ಮೊಬೈಲಲ್ಲಿ ಬ್ಲೋಕ್ ಮಾಡಿದ ದ್ವೇಷ ಹಾಗೂ ಮನೆಗೆ ಬರಬಾರದೆಂದು ಆಗ್ರಹಿಸಿರುವುದೇ ಯುವತಿಯನ್ನು ಆಕ್ರಮಿಸಲು ಕಾರಣವೆಂದು ಅಲಿ ಪೊಲೀಸರಲ್ಲಿ ತಿಳಿಸಿದ್ದಾನೆ. ಆಲುವಾ ದಲ್ಲಿ ಸ್ಕೂಟರ್‌ನಲ್ಲಿ ತಲುಪಿದ ಯುವತಿಯನ್ನು ಆರೋಪಿ ಬೈಕ್ ಉಪಯೋಗಿಸಿ ತಡೆದು ನಿಲ್ಲಿಸಿದ ಬಳಿಕ ದೇಹಕ್ಕೆ ಪೆಟ್ರೋಲ್ ಎರಚಿದ್ದಾನೆ. ಈ ಮಧ್ಯೆ ಯುವತಿ ಪರಾರಿಯಾದ ಹಿನ್ನೆಲೆಯಲ್ಲಿ ಆರೋಪಿ ಕೂಡಾ ಬೈಕ್ ಸಹಿತ ತೆರಳಿದ್ದಾನೆ. ಯುವತಿ ನೀಡಿದ ದೂರಿನಂತೆ ಆರೋಪಿಯನ್ನು ಸೆರೆ ಹಿಡಿಯಲಾಗಿದೆ.