ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ನಾಳೆ ಸಾಮೂಹಿಕ ಶ್ರೀ ಶನೈಶ್ಚರ ಪೂಜೆ, ಅಯೋಧ್ಯೆ ತೀರ್ಥಜಲ ವಿತರಣೆ

ಕಾಸರಗೋಡು: ವಿಶ್ವಹಿಂದೂ ಪರಿಷತ್ ಕಾಸರಗೋಡು ಘಟಕ ಮತ್ತು ಸಾರ್ವಜನಿಕ ಶನೈಶ್ಚರ ಪೂಜಾ ಸಮಿತಿಯ ಸಂಯಕ್ತಾಶ್ರಯದಲ್ಲಿ ಕಾಸರಗೋಡು ಶ್ರೀ ಮಲ್ಲಿಕಾರ್ಜನ ದೇವಸ್ಥಾನದಲ್ಲಿ ನಾಳೆ ಸಾಮೂಹಿಕ ಶ್ರೀ ಶನೀಶ್ವರ   ಪೂಜೆ ನಡೆಯಲಿದೆ. ಮಾತ್ರ ವಲ್ಲ ಅಯೋಧ್ಯೆ ಶ್ರೀರಾಮ ಕ್ಷೇತ್ರದ ಪವಿತ್ರ ತೀರ್ಥಜಲ ವಿತರಣಾ ಕಾರ್ಯ ಕ್ರಮವೂ ಇದರ ಜತೆಗೆ ನಡೆಯಲಿದೆ.

ನಾಳೆ ಸಂಜೆ 5 ಗಂಟೆಗೆ ಸಾಮೂಹಿಕ ಪ್ರಾರ್ಥನೆಯೊಂದಿಗೆ ಪೂಜಾ ಕಾರ್ಯಕ್ರಮ,  ಆರಂಭ ಗೊಳ್ಳಲಿದೆ. 5.30ಕ್ಕೆ ಕಥಾ ವಾಚನ, ರಾತ್ರಿ 7.30ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ. ಇದರ ಜತೆ ಅಯೋಧ್ಯೆಯ ಶ್ರೀರಾಮ ಕ್ಷೇತ್ರದ ಪವಿತ್ರ ಜಲ ವಿತರಣಾ ಕಾರ್ಯಕ್ರಮ ನಡೆಯಲಿದೆ. 8 ಗಂಟೆಗೆ ಮಹಾಪೂಜೆ, ಮಂಗಳಾರತಿ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.

RELATED NEWS

You cannot copy contents of this page