ಮಹಿಳಾ ಮೀಸಲಾತಿ ಮಸೂದೆ: ಇಬ್ಬರಿಂದ ವಿರೋಧ
ನವದೆಹಲಿ: ಬಹು ನಿರೀಕ್ಷಿತ ಮಹಿಳಾ ಮೀಸಲಾತಿ ಮಸೂದೆ ಭಾರೀ ಬಹುಮತದಿಂದ ಲೋಕಸಭೆ ನಿನ್ನೆ ಅಂಗೀಕರಿಸಿದೆ. ೪೫೪ ಮತಗಳು ಮಸೂದೆಯಪರವಾಗಿ ಚಲಾಯಿಸಲ್ಪಟ್ಟರೆ, ಎರಡು ಮತಗಳು ಮಾತ್ರವೇ ವಿರುದ್ಧವಾಗಿ ಚಲಾಯಿಸಲ್ಪಟ್ಟಿದೆ.
ಎಐಎಂಐಎಂ ಪಕ್ಷದ ವರಿಷ್ಠ ನೇತಾರ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಮತ್ತು ಅದೇ ಪಕ್ಷದ ಔರಂಗಾಬಾದ್ ಲೋಕಸಭಾ ಕ್ಷೇತ್ರದ ಸಂಸದ ಇಮ್ತಿಯಾಸ್ ಜಲೀಲ್ ಸಯ್ಯದ್ ಎಂಬಿವರು ಮಸೂದೆ ವಿರುದ್ಧ ಮತ ಚಲಾಯಿಸಿದ್ದಾರೆ.
ಮಹಿಳಾ ಮೀಸಲಾತಿ ವಿಧೇಯಕವನ್ನು ತಾವು ವಿರೋಧಿಸುವುದಾಗಿ ಆಲ್ ಇಂಡಿಯಾ ಮಜ್ಲಿಸ್-ಎ- ಇತ್ತಿಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮಸೂದೆ ಮಂಡನೆಯ ಮೇಲಿನ ಚರ್ಚೆಯ ವೇಳೆಯಲ್ಲೇ ಆ ಪಕ್ಷದ ಇಬ್ಬರು ಸದಸ್ಯರು ತಿಳಿಸಿದರು.
ಮಹಿಳಾ ಮೀಸಲಾತಿ ಮಸೂದೆಯಲ್ಲಿ ಮುಸ್ಲಿಂ ಮತ್ತು ಒಬಿಸಿ ಸಮುದಾಯಗಳಿಗೆ ಪ್ರಾತಿನಿಧ್ಯ ಇಲ್ಲದ ಕಾರಣ ನಾವು ಅವರ ವಿರುದ್ಧ ಮತ ಚಲಾಯಿಸಿದ್ದೇವೆ ಎಂದು ಈ ಇಬ್ಬರು ಸಂಸದರು ಅದಕ್ಕೆ ಕಾರಣ ನೀಡಿದ್ದಾರೆ.