ಮಹಿಳೆ ಮನೆಯೊಳಗೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ

ಬಂದ್ಯೋಡು: ಮಹಿಳೆಯೋ ರ್ವರ ಮೃತದೇಹ ಮನೆಯೊಳಗೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮುಟ್ಟಂ ಸಮೀಪದ ಬೇರಿಕೆ ಬೆಂಗರೆ ನಿವಾಸಿ ಮೆಕ್ಯಾನಿಕ್  ಚಂದ್ರಹಾಸರ ಪತ್ನಿ ಭವಾನಿ (56)ಯ ಮೃತದೇಹ ಪತ್ತೆಯಾಗಿದ. ನಿನ್ನೆ ಮಧ್ಯಾಹ್ನ ಮನೆಯಲ್ಲಿ ಇವರು ಮಾತ್ರವಿದ್ದು ಪತಿ ಫೋನ್ ಕರೆ ಮಾಡಿದಾಗ ಸ್ವೀಕರಿಸದ ಕಾರಣ ಪರಿಸರದ ಸಂಬಂಧಿಕರು ಮನೆಯೊಳಗೆ ತೆರಳಿ ನೋಡಿದ್ದಾರೆ. ಆಗ ಕೊಠಡಿಯಲ್ಲಿ ಫ್ಯಾನ್‌ಗೆ ಬಟ್ಟೆಯಿಂದ ನೇಣು ಬಿಗಿದ ಸ್ಥಿತಿಯಲ್ಲಿ ಭವಾನಿ ಪತ್ತೆಯಾಗಿದ್ದಾರೆ. ಕೂಡಲೇ ತಲುಪಿದ ಪತಿ ಹಾಗೂ ಸಂಬಂಧಿಕರು ಬಂದ್ಯೋಡಿನ ಖಾಸಗಿ ಆಸ್ಪತ್ರೆಗೆ ಕೊಂಡೊಯ್ದಿದ್ದು ಅಷ್ಟರಲ್ಲಿ ಮೃತಪಟ್ಟಿದ್ದರು. ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕಾಸರ ಗೋಡು ಜನರಲ್ ಆಸ್ಪತ್ರೆಯಲ್ಲಿ ಮರ ಣೋತ್ತರ ಪರೀಕ್ಷೆ ನಡೆಸಲಾಯಿತು.

ಮೃತರು ಪತಿ, ಮಕ್ಕಳಾದ ಸಾರಿಕ, ಸಂಧ್ಯಾ, ಸಚಿನ್, ಅಳಿಯಂ ದಿರಾದ ಶೈಲೇಶ್ ಉದ್ಯಾವರ, ಲೋಹಿತ್ ಮುಟ್ಟಂಬೆಂಗರೆ, ಸಹೋದರ-ಸಹೋದರಿಯರಾದ ನಿರ್ಮಲ, ಲೀಲಾ, ವಾಮನ, ರಮಣಿ, ಆನಂದ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

RELATED NEWS

You cannot copy contents of this page